ಕರ್ನಾಟಕ

karnataka

ETV Bharat / sitara

ಕಟಿಂಗ್ ಶಾಪ್​ಗೆ ಧನಂಜಯ ಸಾಥ್ : ಹೊಸ ಪ್ರತಿಭೆಗಳನ್ನ ಬೆನ್ನುತಟ್ಟಿದ ಡಾಲಿ! - ನಟ ಡಾಲಿ ಧನಂಜಯ

ಹೊಸಬರ ಈ ವಿಶಿಷ್ಟ ಪ್ರಯತ್ನಕ್ಕೆ ನಟ ಡಾಲಿ ಧನಂಜಯ್ ಸಪೋರ್ಟ್ ಮಾಡಿದ್ದಾರೆ. ಅಷ್ಟಕ್ಕೂ ಕಟಿಂಗ್ ಶಾಪ್ ಚಿತ್ರತಂಡ ಡಾಲಿ ಬಳಿ ತಾವು ಮಾಧ್ಯಮದವರು ಸಂದರ್ಶನ ಬೇಕು ಅಂತಾ ಹೇಳಿತ್ತು. ಕೊನೆಗೆ ಧನಂಜಯ್​ ಭೇಟಿಯಾದ ವೇಳೆ ಮಾತಿಗೆ ಕುಳಿತಾಗ ತಾವೊಂದು ಸಿನಿಮಾ ಟೀಮ್‌ ಕಡೆಯಿಂದ ಬಂದಿದ್ದೇವೆ..

Dhananjaya Saath to Cutting Shop
ಕಟಿಂಗ್ ಶಾಪ್​ಗೆ ಧನಂಜಯ ಸಾಥ್

By

Published : Mar 27, 2021, 6:00 PM IST

ಬೆಂಗಳೂರು : ಹೊಸ ಐಡಿಯಾ ಹಾಗೂ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ‌. ಇದೀಗ ಇಲ್ಲೊಂದು ಯುವಕರ ತಂಡ ಕಟಿಂಗ್ ಶಾಪ್ ಅಂತಾ ಕ್ಯಾಚಿ ಟೈಟಲ್ ಇಟ್ಟುಕೊಂಡು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ‌.

ಕಟಿಂಗ್ ಶಾಪ್​ಗೆ ನಟ ಧನಂಜಯ ಸಾಥ್..

ಕಟಿಂಗ್‌ ಶಾಪ್‌ ಅಂದಾಕ್ಷಣ ನಮಗೆಲ್ಲ ತಕ್ಷಣಕ್ಕೆ ಕಣ್ಣ ಮುಂದೆ ಬರೋದೇ ಹೇರ್ ಕಟ್ ಶಾಪ್. ಆದರೆ, ಇದು ಹೇರ್​ ಕಟಿಂಗ್​ ಮೇಲಿನ ಸಿನಿಮಾ ಅಲ್ಲ. ಇದು ಸಿನಿಮಾ ಸಂಕಲನಕಾರನೊಬ್ಬನ ಕಥೆ. ಆಪರೇಷನ್‌ ಅಲಮೇಲಮ್ಮ, ಮಾಯಾ ಬಜಾರ್‌ ಅಂತಹ, ಸಿನಿಮಾಗಳಲ್ಲಿ ರೈಟರ್ ಆಗಿ ಕೆಲಸ ಮಾಡಿರುವ ಪವನ್ ಭಟ್ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಹೊಸಬರ ಈ ವಿಶಿಷ್ಟ ಪ್ರಯತ್ನಕ್ಕೆ ನಟ ಡಾಲಿ ಧನಂಜಯ್ ಸಪೋರ್ಟ್ ಮಾಡಿದ್ದಾರೆ. ಅಷ್ಟಕ್ಕೂ ಕಟಿಂಗ್ ಶಾಪ್ ಚಿತ್ರತಂಡ ಡಾಲಿ ಬಳಿ ತಾವು ಮಾಧ್ಯಮದವರು ಸಂದರ್ಶನ ಬೇಕು ಅಂತಾ ಹೇಳಿತ್ತು. ಕೊನೆಗೆ ಧನಂಜಯ್​ ಭೇಟಿಯಾದ ವೇಳೆ ಮಾತಿಗೆ ಕುಳಿತಾಗ ತಾವೊಂದು ಸಿನಿಮಾ ಟೀಮ್‌ ಕಡೆಯಿಂದ ಬಂದಿದ್ದೇವೆ. ಕಟಿಂಗ್‌ ಶಾಪ್‌ ಅಂತಾ ಸಿನಿಮಾ ಎಂದಾಗ ಧನಂಜಯ ಶಾಕ್ ಆಗಿದ್ದಾರೆ.‌ ಹೀಗೊಂದು ಡಿಫೆರೆಂಟ್‌ ಸ್ಟೈಲ್​ನಲ್ಲಿ ಕಟಿಂಗ್‌ ಶಾಪ್‌ ಟೀಸರ್‌ ಲಾಂಚ್‌ ಆಗಿದೆ.

ಧನಂಜಯ್ ಬಿಡುಗಡೆ ಮಾಡಿ ಈ ಹೊಸಬರ ತಂಡಕ್ಕೆ ಬೆನ್ನು ತಟ್ಟಿದ್ದಾರೆ. ಪ್ರವೀಣ್‌ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾತ್ರವಲ್ಲ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಅವರೊಂದಿಗೆ ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ, ಹಿರಿಯ ನಿರ್ದೇಶಕ ಭಗವಾನ್‌, ಓಂ ಪ್ರಕಾಶ್‌ ರಾವ್‌ ಸೇರಿ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸ್ಕಂದ ರತ್ನ ಛಾಯಾಗ್ರಹಣ ಮಾಡಿದ್ದಾರೆ. ಸಾಗರ್‌ ಗಣೇಶ್‌ ಸಂಕಲನ ಈ ಚಿತ್ರಕ್ಕಿದೆ. ಉಮೇಶ್‌ ಹಾಗೂ ಕೆ. ಗಣೇಶ ಐತಾಳ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಸದ್ಯ ಪಿಆರ್‌ಕೆ ಆಡಿಯೋ ಸಂಸ್ಥೆಯ ಮೂಲಕ ಈ ಕಟಿಂಗ್ ಶಾಪ್ ಚಿತ್ರದ ಟೀಸರ್ ಬಿಡುಗಡೆ ಆಗಿ ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ABOUT THE AUTHOR

...view details