ದೇಶದೆಲ್ಲೆಡೆ 72ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದೆ. ಸುದೀಪ್, ದರ್ಶನ್, ಪುನೀತ್ ರಾಜ್ಕುಮಾರ್ ಹಾಗೂ ಇನ್ನಿತರ ನಟ,ನಟಿಯರು ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ. ಡಾಲಿ ಧನಂಜಯ್ ಮಕ್ಕಳ ಜೊತೆ ಈ ಬಾರಿಯ ಗಣರಾಜ್ಯೋತ್ಸವ ಆಚರಿಸಿದ್ದಾರೆ.
ಗಣರಾಜ್ಯೋತ್ಸವದ ಬಗ್ಗೆ ಮಕ್ಕಳಿಗೆ ಪಾಠ ಮಾಡಿದ ನಟ ಧನಂಜಯ್... ! - Dhananjaya taught Children
ಈ ಬಾರಿಯ ಗಣರಾಜ್ಯೋತ್ಸವವನ್ನು ಡಾಲಿ ಧನಂಜಯ್ ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಹಾವೇರಿ ಶಾಲೆಯೊಂದಲ್ಲಿ ಧ್ವಜಾರೋಹಣ ಮಾಡಿದ ಧನಂಜಯ್ ಮಕ್ಕಳಿಗೆ ಗಣರಾಜ್ಯೋತ್ಸವದ ಪಾಠ ಮಾಡಿದ್ದಾರೆ.
ಇದನ್ನೂ ಓದಿ:72ನೇ ಗಣರಾಜ್ಯೋತ್ಸವದ ಶುಭ ಕೋರಿದ ಸ್ಯಾಂಡಲ್ವುಡ್ ನಟರು
'ರತ್ನನ್ ಪ್ರಪಂಚ' ಸಿನಿಮಾ ಚಿತ್ರೀಕರಣಕ್ಕಾಗಿ ಧನಂಜಯ್ ಸದ್ಯಕ್ಕೆ ಹಾವೇರಿಯಲ್ಲಿ ನೆಲೆಸಿದ್ದಾರೆ. ಸ್ಥಳೀಯ ಶಾಲೆಯೊಂದರಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಧನಂಜಯ್ ಭಾಗಿಯಾಗಿದ್ದಾರೆ. ಊರಿನ ಸರ್ಕಾರಿ ಶಾಲಾ ಶಿಕ್ಷಕರು ಧನಂಜಯ್ ಅವರನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಕಾರ್ಯಕ್ರಮಕ್ಕೆ ಬರಲು ಖುಷಿಯಿಂದ ಒಪ್ಪಿಕೊಂಡ ಡಾಲಿ, ಶಾಲೆಗೆ ಬಂದು ಧ್ವಜಾರೋಹ ಮಾಡಿ ನಂತರ ಮಕ್ಕಳಿಗೆ ಪಾಠ ಮಾಡಿದ್ದಾರೆ. ತಮಗೆ ಒಲಿದ ಈ ಅವಕಾಶಕ್ಕೆ ಧನಂಜಯ್ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಧನಂಜಯ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.