ಕರ್ನಾಟಕ

karnataka

ETV Bharat / sitara

ಡಾನ್ ಜೈರಾಜ್ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ಡಾಲಿ ಧನಂಜಯ್‌.. - ಡಾಲಿ ಧನಂಜಯ್​

ಸದ್ಯ ಡಾಲಿ ಕೂಡ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಹತ್ತು ಕೆಜಿ ತೂಕ ಹೆಚ್ಚಿಸಿಕೊಂಡು ಒಂದ್ ಶೇಡ್ ಶೂಟಿಂಗ್ ಮುಗಿಸಿ ನಂತರ ಮತ್ತೆ ವರ್ಕ್ ಔಟ್ ಮಾಡಿ ಖಡಕ್ ಆಗಿ ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂದು ಡಾಲಿ ಈಟಿವಿ ಭಾರತಗೆ ತಿಳಿಸಿದ್ದಾರೆ.

Dhananjay has gained body weight for the role of Jai Raj
ಡಾನ್ ಜೈರಾಜ್ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ಡಾಲಿ

By

Published : Jun 9, 2020, 5:18 PM IST

Updated : Jun 9, 2020, 10:41 PM IST

ಟಗರು ಚಿತ್ರದಿಂದ ಸಖತ್​ ಹೆಸರು ಮಾಡಿದ ಡಾಲಿ ಧನಂಜಯ್ ಡಾನ್ ಜೈರಾಜ್ ಪಾತ್ರದಲ್ಲಿ ನಟಿಸೋದು ಈಗಾಗಲೇ ಪಕ್ಕಾ ಆಗಿದೆ. ಜೈರಾಜ್ ಬಯೋಪಿಕ್​​ನಲ್ಲಿ ನಟಿಸುತ್ತಿರುವ ಡಾಲಿ ಧನಂಜಯ್‌ ಆ ಪಾತ್ರಕ್ಕೆ ಬೇಕಾದಂತೆ ತಯಾರಿ ನಡೆಸುತ್ತಿದ್ದಾರೆ.

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಜೈರಾಜ್ ಕುಸ್ತಿಪಟು ಆಗಿದ್ದ. ಅಲ್ಲದೆ ಖಡಕ್ ಮೈಕಟ್ಟು ಹೊಂದಿದ್ದ. ಹಾಗಾಗಿ ಡಾಲಿ ಕೂಡ ಆ ಪಾತ್ರಕ್ಕಾಗಿ ಭರ್ಜರಿ ತಯಾರಿ ಮಾಡಿದ್ದು, ಈಗಾಗಲೇ ಐದು ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.

ಡಾನ್ ಜೈರಾಜ್ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ಡಾಲಿ..

ಕಳೆದ ಎರಡು ತಿಂಗಳಿಂದ ಲಾಕ್‌ಡೌನ್ ಇರೋದು ಡಾಲಿಗೆ ಒಂದು ರೀತಿ ಹೆಲ್ಪ್ ಆಗಿದೆ. ಜೈರಾಜ್ ಪಾತ್ರಕ್ಕೆ ಹೋಲುವ ಹಾಗೆ ದೇಹ ರೆಡಿ ಮಾಡ್ಕೋತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಜೈರಾಜ್ ಪಾತ್ರದ ಎರಡು ಶೇಡ್​​ಗಳಲ್ಲಿ ಡಾಲಿ ಕಾಣಿಸಲಿದ್ದಾರೆ. ಜೈರಾಜ್ ಭೂಗತ ಲೋಕಕ್ಕೆ ಬರೋಕು ಮುಂಚೆ ಗರಡಿ ಮನೆಯಲ್ಲಿ ದೇಹ ದಂಡಿಸಿ ಕಟ್ಟು ಮಸ್ತಾದ ದೇಹ ಹೊಂದಿದ್ದ. ಆದರೆ, ಭೂಗತ ಲೋಕಕ್ಕೆ ಬಂದ ಮೇಲೆ ಗರಡಿ ಮನೆಯಲ್ಲಿ ದೇಹ ದಂಡಿಸದೆ ಅಜಾನುಬಾಹು ರೀತಿ ಜೈರಾಜ್ ದೇಹ ಬೆಳೆಸಿದ್ದ.

ಸದ್ಯ ಡಾಲಿ ಕೂಡ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಹತ್ತು ಕೆಜಿ ತೂಕ ಹೆಚ್ಚಿಸಿಕೊಂಡು ಒಂದ್ ಶೇಡ್ ಶೂಟಿಂಗ್ ಮುಗಿಸಿ ನಂತರ ಮತ್ತೆ ವರ್ಕ್ ಔಟ್ ಮಾಡಿ ಖಡಕ್ ಆಗಿ ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂದು ಡಾಲಿ ಈಟಿವಿ ಭಾರತಗೆ ತಿಳಿಸಿದ್ದಾರೆ. ಜೈರಾಜ್ ಬಯೋಪಿಕ್ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಬರೆಯಲಿದ್ದಾರೆ. ಆಸು ಬೆದ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಹೊಸ ಪ್ರತಿಭೆಶೂನ್ಯ ಎಂಬುವರು ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಲಿದ್ದಾರೆ.

ಮಲ್ಟಿ ಲಾಂಗ್ವೇಜ್​​​ನಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ಈ ಚಿತ್ರದ ಪ್ರೀಪ್ರೋಡಕ್ಷನ್ ವರ್ಕ್ ಕಂಪ್ಲೀಟ್ ಆಗಿದೆ. ಲಾಕ್‌ಡೌನ್ ಮುಗಿದು ಸರ್ಕಾರ ಶೂಟಿಂಗ್​​​ಗೆ ಅನುಮತಿ ನೀಡಿದ ಕೂಡಲೇ ಚಿತ್ರತಂಡ ಶೂಟಿಂಗ್ ಅಖಾಡಕ್ಕಿಳಿಯಲಿದೆ.

Last Updated : Jun 9, 2020, 10:41 PM IST

ABOUT THE AUTHOR

...view details