ಪೊಲೀಸ್ ಅಧಿಕಾರಿಯಾಗಿ ಗನ್ ಹಿಡಿದು ಎನ್ಕೌಂಟರ್ ಮಾಡಿ, ಕ್ರಿಮಿನಲ್ಗಳ ಮೈ ಚಳಿ ಬಿಡಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು, ರಿಟೈರ್ಡ್ ಆಗಿ ಒಂದೇ ವಾರಕ್ಕೆ ಪೆನ್, ಪೇಪರ್ ಹಿಡಿದು ಸಿನಿಮಾಗಾಗಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.
ಎಸಿಪಿ ಆಗಿ ಕಾರ್ಯ ನಿರ್ವಹಿಸಿ ಇದೀಗ ನಿವೃತ್ತಿ ಆಗಿರುವ ಮಾಜಿ ಪೊಲೀಸ್ ಅಧಿಕಾರಿ ಉಮೇಶ್, ಈಗ ಸ್ಕ್ರಿಪ್ಟ್ ರೈಟರ್ ಆಗಿದ್ದಾರೆ. ಈ ಚಿತ್ರಕ್ಕೆ 'ಹೇ ರಾಮ್' ಎಂಬ ಪವರ್ಪುಲ್ ಟೈಟಲ್ ಇಟ್ಟಿದ್ದು ನಿನ್ನೆ ಚಿತ್ರದ ಮುಹೂರ್ತ ನೆರವೇರಿದೆ. ಈ ಸಿನಿಮಾಗೆ ಡಾಲಿ ಧನಂಜಯ್ ಆಗಮಿಸಿ ಕ್ಲ್ಯಾಪ್ ಮಾಡಿ ಶುಭ ಕೋರಿದ್ದಾರೆ. ತಾವು ಎಸಿಪಿ ಆಗಿ ಕಾರ್ಯ ನಿರ್ವಹಿಸುವಾಗ ನಡೆದ ನೈಜ ಘಟನೆಯನ್ನು ಉಮೇಶ್ ಅವರು ಕಥೆ ಬರೆದು ಇದೀಗ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ.
'ಹೇ ರಾಮ್' ಸಿನಿಮಾ ಮುಹೂರ್ತ ಉಮೇಶ್ ಅವರ ಕಥೆಗೆ ಪ್ರವೀಣ್ ಬೇಲೂರು ನಿರ್ದೇಶನ ಮಾಡುತ್ತಿದ್ದಾರೆ. ಒಬ್ಬ ಬುದ್ಧಿವಂತ ವ್ಯಕ್ತಿ ಅಪರಾಧ ಲೋಕಕ್ಕೆ ಎಂಟ್ರಿ ಕೊಟ್ರೆ ಏನೆಲ್ಲಾ ನಡೆಯಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ನಟ ಧರ್ಮ ಇನ್ವೆಸ್ಟಿಗೇಷನ್ ಮಾಡುವ ಡಿಸಿಪಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ವೃತ್ತಿ ಜೀವನದಲ್ಲಿ ಬಹಳ ವಿಶೇಷವಾದ ಪಾತ್ರವಂತೆ. ಆದರೆ ಚಿತ್ರದ ಪ್ರಮುಖ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ಇಂದಿಗೂ ಸಸ್ಪೆನ್ಸ್ ಆಗಿ ಇಟ್ಟಿದೆ.
'ಹೇ ರಾಮ್' ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಫೀಮೇಲ್ ಲೀಡ್ ರೋಲ್ನಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.