ಕರ್ನಾಟಕ

karnataka

ETV Bharat / sitara

'ಧಮಾಕಾ' ಟ್ರೈಲರ್​ನಲ್ಲಿ ಬಿರುಸಿನ ನಟನೆಯೊಂದಿಗೆ ಮಿಂಚಿದ ನಟ ಕಾರ್ತಿಕ್‌ ಆರ್ಯನ್​.. - ಚಲನಚಿತ್ರ ನಿರ್ಮಾಪಕ ರಾಮ್ ಮಾಧ್ವನಿ

'ಧಮಾಕಾ' ಎಂಬ ರೋಮಾಂಚಕ ಕಥೆಯ ಮಿಶ್ರಣವನ್ನು ಒಟ್ಟುಗೂಡಿಸಲು ಪ್ರಪಂಚದಾದ್ಯಂತದ ನಾಲ್ಕು ನಿರ್ಮಾಣ ಕಂಪನಿಗಳಾದ ಆರ್‌ಎಸ್‌ವಿಪಿ ಮೂವೀಸ್, ರಾಮ್ ಮಾಧ್ವನಿ ಫಿಲ್ಮ್ಸ್, ಲೊಟ್ಟೆ ಎಂಟರ್‌ಟೈನ್‌ಮೆಂಟ್ ಮತ್ತು ಗ್ಲೋಬಲ್ ಗೇಟ್ ಎಂಟರ್‌ಟೈನ್‌ಮೆಂಟ್ ಸೇರಿಕೊಂಡಿವೆ.

kartik-aaryan
ನಟ ಕಾರ್ತಿಕ್‌ ಆರ್ಯನ್

By

Published : Oct 19, 2021, 4:51 PM IST

ಮುಂಬೈ (ಮಹಾರಾಷ್ಟ್ರ): ನೀರ್ಜಾ ಮತ್ತು 2020 ಡಿಸ್ನಿ+ ಹಾಟ್‌ಸ್ಟಾರ್ ಸ್ಪೆಷಲ್​ ಎಪಿಸೋಡ್​ಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ಮಾಪಕ ರಾಮ್ ಮಾಧ್ವನಿ ಅವರು ಮತ್ತೊಂದು ಆಕರ್ಷಕ ಕಥೆಯೊಂದಿಗೆ ಮರಳಿದ್ದಾರೆ. ಕಾರ್ತಿಕ್ ಆರ್ಯನ್ ನಟನೆಯ ಧಮಾಕಾ ಅವರ ಇತ್ತೀಚಿನ ಕೊಡುಗೆಯಾಗಿದೆ. ಅದರ ಟ್ರೈಲರ್ ಅನ್ನು ಮಂಗಳವಾರ ಇಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಈ ಚಿತ್ರವು ಕಾರ್ತಿಕ್‌ ಅವರ ತೀವ್ರ ಮತ್ತು ಬಿರುಸಿನ ಕಥಾ ಪ್ರಪಂಚವನ್ನು ಒಳಗೊಂಡಿದೆ. ಭಯೋತ್ಪಾದಕರು ಇಡೀ ನಗರದ ಮೇಲೆ ದಾಳಿ ನಡೆಸುವ ಬಗ್ಗೆ ಸುದ್ದಿ ನಿರೂಪಕ ಅರ್ಜುನ್ ಪಾಠಕ್ ಫೋನ್ ಕರೆ ಸ್ವೀಕರಿಸುತ್ತಾರೆ. ಮೊದಲಿಗೆ ಅದನ್ನು ಅವರು ತಮಾಷೆಯಾಗಿ ಸ್ವೀಕರಿಸುತ್ತಾರೆ. ಆದರೆ, ಭಯೋತ್ಪಾದಕರು ಸೇತುವೆ ಸ್ಫೋಟಿಸಿದಾಗ ಪರಿಸ್ಥಿತಿಯ ಗಂಭೀರತೆಯನ್ನು ಅವರು ಶೀಘ್ರದಲ್ಲೇ ಅರಿತುಕೊಳ್ಳುತ್ತಾರೆ.

ಭಯೋತ್ಪಾದಕರ ಚಟುವಟಿಕೆಗಳನ್ನು ವರದಿ ಮಾಡುವ ಮತ್ತು ಅವರ ಹವ್ಯಾಸಗಳನ್ನು ಗಮನಿಸುವ ಕೆಲಸಕ್ಕೆ ಅರ್ಜುನ್ ತನ್ನ ವೃತ್ತಿಜೀವನವನ್ನು ಪರಿವರ್ತಿಸಿಕೊಳ್ಳುತ್ತಾರೆ. ಮನಸ್ಸನ್ನು ತಲ್ಲಣಗೊಳಿಸುವ ಮತ್ತು ಮನ ಕಲಕುವಂತಹ ಕ್ಷಣಗಳಿಂದ ತುಂಬಿರುವ ಧಮಾಕಾ ಟ್ರೈಲರ್ ರೋಲರ್ - ಕೋಸ್ಟರ್ ಜಗತ್ತಿನಲ್ಲಿ ಮಿಂಚಿನ ವೇಗದಲ್ಲಿ ಯೋಚಿಸುವ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯದ ಅವಶ್ಯಕತೆಯನ್ನ ಈ ಚಿತ್ರ ಪ್ರತಿಪಾದಿಸುತ್ತಿದೆ.

'ಧಮಾಕಾ' ಎಂಬ ರೋಮಾಂಚಕ ಕಥೆಯ ಮಿಶ್ರಣದ ಈ ಚಿತ್ರದ ನಿರ್ಮಾಣವನ್ನು ವಿಶ್ವದ ಪ್ರಸಿದ್ಧ ಕಂಪನಿಗಳಾದ ಆರ್‌ಎಸ್‌ವಿಪಿ ಮೂವೀಸ್, ರಾಮ್ ಮಾಧ್ವನಿ ಫಿಲ್ಮ್ಸ್, ಲೊಟ್ಟೆ ಎಂಟರ್‌ಟೈನ್‌ಮೆಂಟ್ ಮತ್ತು ಗ್ಲೋಬಲ್ ಗೇಟ್ ಎಂಟರ್‌ಟೈನ್‌ಮೆಂಟ್ ಮಾಡುತ್ತಿವೆ. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಅಮೃತ ಸುಭಾಷ್ ಕೂಡ ನಟಿಸಿದ್ದಾರೆ. ಈ ಸಿನಿಮಾವನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಓದಿ:ಏಕಕಾಲದಲ್ಲಿ 2 ಭಾಷೆ, 3 ರಾಜ್ಯಗಳ ಚಿತ್ರಮಂದಿರಗಳಲ್ಲಿ 'ಭಜರಂಗಿ 2' ರಿಲೀಸ್

ABOUT THE AUTHOR

...view details