ಕರ್ನಾಟಕ

karnataka

ETV Bharat / sitara

ನೋಟ್​​​​ಬುಕ್​​​​​​​ ಮೇಲೂ 'ಯಜಮಾನ' ನ ಹವಾ... ಪುಸ್ತಕಗಳಿಗೆ ಭಾರೀ ಡಿಮ್ಯಾಂಡ್ - undefined

ಒಂದು ಕಾಲದಲ್ಲಿ ನೋಟ್​ಬುಕ್​​ಗಳ ಮೇಲೆ ಪ್ರಾಣಿ,ಪಕ್ಷಿಗಳು, ವಿಜ್ಞಾನಕ್ಕೆ ಸಂಬಂಧಿಸಿದ ಫೋಟೋಗಳು ಪ್ರಿಂಟ್ ಆಗುತ್ತಿದ್ದವು. ಇದೀಗ ನಟ ದರ್ಶನ್ ಫೋಟೋ ಇರುವ ನೋಟ್​​ಪುಸ್ತಕಗಳು ಮಾರುಕಟ್ಟೆಗೆ ಬಂದಿದ್ದು ಹಾಟ್​​ ಕೇಕ್​​​ನಂತೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

ದರ್ಶನ್

By

Published : Jun 23, 2019, 4:46 PM IST

ಸ್ಯಾಂಡಲ್​​ವುಡ್​​ನಲ್ಲಿ ನಟ ದರ್ಶನ್ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ. ಸಿನಿಮಾ ಮಾತ್ರವಲ್ಲ ತಮ್ಮ ಸಮಾಜಮುಖಿ ಕಾರ್ಯಗಳಿಂದಲೂ ಅವರು ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತಾರೆ.

ದರ್ಶನ್​​​ ಚಿತ್ರವಿರುವ ನೋಟ್​​ಬುಕ್

ಹೃದಯವಂತಿಕೆಯಲ್ಲೂ ಯಜಮಾನನಾಗಿರುವ ದಚ್ಚು ಅಂದ್ರೆ ಅವರ ಅಭಿಮಾನಿ ಬಳಗಕ್ಕೆ ಇನ್ನಿಲದ ಪ್ರೀತಿ. ರಾಜ್ಯದ ಮೂಲೆ ಮೂಲೆಗಳಲ್ಲೂ ದರ್ಶನ್​​​ಗೆ ಸಾಕಷ್ಟು ಅಭಿಮಾನಿಗಳಿದ್ದು ಆಟೋ, ಬೈಕ್, ಕಾರು, ಬಸ್ ಅಷ್ಟೇ ಏಕೆ ಅಭಿಮಾನಿಗಳ ದೇಹದ ಮೇಲೂ ದಾಸನ ಟ್ಯಾಟ್ಯೂ ರಾರಾಜಿಸುತ್ತಿದೆ. ಇದೀಗ ದಚ್ಚು ಫೋಟೋ ನೋಟ್ ಪುಸ್ತಕಗಳ ಮೇಲೂ ರಾರಾಜಿಸುತ್ತಿದ್ದು ಅವರು ನ್ಯೂ ಟ್ರೆಂಡ್ ಸೆಟರ್​​​​​​ ಆಗಿದ್ದಾರೆ.

ನೋಟ್​ಬುಕ್ ಮೇಲೆ ದರ್ಶನ್​ ಫೋಟೋ

ಒಂದು ಕಾಲದಲ್ಲಿ ನೋಟ್ ಪುಸ್ತಕಗಳ ಮೇಲೆ ಸಾಮಾನ್ಯವಾಗಿ ಪ್ರಾಣಿ ಪಕ್ಷಿಗಳು ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ್ದ ಫೋಟೋಗಳು ನೋಟ್ ಬುಕ್​ಗಳ ಮೇಲೆ ಪ್ರಿಂಟ್ ಆಗುತ್ತಿದ್ದವು. ಈಗ ದಚ್ಚು ಪೋಟೋ ಪ್ರಿಂಟ್ ಇರುವ ನೋಟ್​​​​​​​​​​ಬುಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಪುಸ್ತಕವನ್ನು ಖಾಸಗಿ ಕಂಪನಿಯೊಂದು ಮಾರುಕಟ್ಟೆಗೆ ತಂದಿದೆ. ಈಗ ಈ ನೋಟ್ ಬುಕ್​​​ಗಳಿಗೆ ಸಖತ್ ಡಿಮ್ಯಾಂಡ್ ಕೂಡಾ ಇದೆಯಂತೆ.

For All Latest Updates

TAGGED:

ABOUT THE AUTHOR

...view details