ಕರ್ನಾಟಕ

karnataka

ETV Bharat / sitara

ಮ್ಯಾನೇಜರ್​-ಅಭಿಮಾನಿ ಹೊಡೆದಾಟ ಕೇಸ್​.. ನಟ ವಿಜಯ್​ ಸೇತುಪತಿ ವಿರುದ್ಧ ಮಾನನಷ್ಟ ಮೊಕದ್ದಮೆ - ನಟ ವಿಜಯ್​ ಸೇತುಪತಿ ವಿರುದ್ಧ ಮಾನನಷ್ಟ ಮೊಕದ್ದಮೆ

ತಮಿಳು ನಟ ವಿಜಯ್​ ಸೇತುಪತಿ ಅವರ ಅಭಿಮಾನಿ ಮತ್ತು ಮ್ಯಾನೇಜರ್​ ಮಧ್ಯೆ ನಡೆದ ಹೊಡೆದಾಟ ವಿಚಾರಕ್ಕೆ ಸಂಬಂಧಪಟ್ಟಂತೆ ನಟನ ವಿರುದ್ಧ ಚೆನ್ನೈನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ.

vijaysethupathy
ನಟ ವಿಜಯ್​ ಸೇತುಪತಿ

By

Published : Dec 5, 2021, 10:58 PM IST

ಚೆನ್ನೈ:ನಟ ವಿಜಯ್​ ಸೇತುಪತಿ ಅವರ ಅಭಿಮಾನಿ ಮತ್ತು ಮ್ಯಾನೇಜರ್​ ಮಧ್ಯೆ ನಡೆದ ಹೊಡೆದಾಟ ವಿಚಾರಕ್ಕೆ ಸಂಬಂಧಪಟ್ಟಂತೆ ನಟನ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ.

ಸೈತಾಪೇಟೆಯ ಮಹಾಗಾಂಧಿ ಎಂಬುವವರು ನಟ ವಿಜಯ್​ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ನಾನು ಈ ಹಿಂದೆ ನಟ ವಿಜಯ್​ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ್ದೆ. ಈ ವೇಳೆ ನಟ ವಿಜಯ್​ ಸಾಧನೆಗಾಗಿ ಅವರನ್ನು ಶ್ಲಾಘಿಸಿದೆ. ಆದರೆ, ಅವರು ನನ್ನ ಮೆಚ್ಚುಗೆಯನ್ನು ತಿರಸ್ಕರಿಸಿದರು. ಅಲ್ಲದೇ, ಸಾರ್ವಜನಿಕವಾಗಿ ನನ್ನನ್ನು ನಿಂದಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಡುಮ್ಮಿಯಲ್ಲಮ್ಮಿ ಬಳುಕೋ ಬಳ್ಳಿಗೂ ಇಲ್ಲ ಕಮ್ಮಿ.. 3 ತಿಂಗಳಲ್ಲಿ 20 ಕೆಜಿ ಇಳಿಸಿಕೊಂಡು ಅರಳಿದ 'ಖುಷ್ಬೂ'

ಬಳಿಕ ವಿಜಯ್​ ಸೇತುಪತಿ ಅವರ ಮ್ಯಾನೇಜರ್​ ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದರು. ಈ ವೇಳೆ ನನ್ನ ಕಿವಿಗಳಿಗೆ ಹಾನಿಯಾಗಿದೆ. ಇದರಿಂದ ನನ್ನ ಶ್ರವಣ ಸಾಮರ್ಥ್ಯ ಕ್ಷೀಣಿಸಿದೆ. ಘಟನೆಯ ಮರುದಿನ ನಟ ಸೇತುಪತಿ ಮ್ಯಾನೇಜರ್​ ಜಾನ್ಸನ್​ ಮೇಲೆ ನಾನೇ ಹಲ್ಲೆ ಮಾಡಿದೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ಇದು ಅಪರಾಧ ಕೃತ್ಯವಾಗಿದೆ. ಅವರ ಮೇಲೆ ಕ್ರಿಮಿನಲ್​ ಮೊಕದ್ದಮೆ ದಾಖಲಿಸಬೇಕು ಎಂದು ದೂರುದಾರ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details