ಕರ್ನಾಟಕ

karnataka

ETV Bharat / sitara

ಗ್ರೀಕ್​ ದೇಶದಲ್ಲೂ ಫೇಮಸ್ಸಾಯ್ತು ಕನ್ನಡತಿ ದೀಪಿಕಾ ಪಡುಕೋಣೆ ನಗು!! - ದೀಪಿಕಾ ದಾಸ್​​ ನಗು

ಈ ನಗುವಿನ ಪ್ರದರ್ಶನದಲ್ಲಿ ದೀಪಿಕಾ ಜತೆಗೆ ಆಫ್ರಿಕಾ, ಅಮೆರಿಕಾ, ಚೀನಾ ಸೇರಿದಂತೆ ಪ್ರಪಂಚದ ನಾನಾ ದೇಶಗಳ ಪ್ರಮುಖರ ನಗುವನ್ನು ಇಲ್ಲಿ ಅನಾವರಣ ಮಾಡಲಾಗಿದೆ..

Deepika Padukone 'smile' makes it to 'Authentic Smiles' exhibition at Athens airport
ಗ್ರೀಕ್​ ದೇಶದಲ್ಲೂ ಫೇಮಸ್ಸಾಯ್ತು ದೀಪಿಕಾ ನಗು

By

Published : Dec 9, 2020, 7:39 PM IST

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ನಗು ಕೇವಲ ಭಾರತದಲ್ಲಿ ಮಾತ್ರ ಜನಜನಿತವಾಗಿಲ್ಲ. ಇದೀಗ ದೇಶದ ಗಡಿ ದಾಟಿ ಹೋಗಿ ಗ್ರೀಕ್​ ದೇಶದ ರಾಜಧಾನಿ ಅಥೆನ್ಸ್​​​ನಲ್ಲಿಯೂ ದೀಪಿಕಾ ಸ್ಮೈಲ್​​​ ಸಖತ್​​ ಫೇಮಸ್​​ ಆಗಿದೆ.

ಅಥೆನ್ಸ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ ನಗುವಿರುವ ಪ್ರತಿಮೆ ಅನಾವರಣ ಮಾಡಲಾಗಿದೆ. ಅಲ್ಲದೆ 'ದೀಪಿಕಾರ ನಗುವನ್ನು ನಿಖರವಾದ ನಗು' ಎಂದು ಘೋಷಿಸಲಾಗಿದೆ. ಈ ಬಗ್ಗೆ ಸ್ವತಃ ದೀಪಿಕಾ ಪಡುಕೋಣೆಯೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಪ್ರತಿಮೆ

ಈ ನಗುವಿನ ಪ್ರದರ್ಶನದಲ್ಲಿ ದೀಪಿಕಾ ಜತೆಗೆ ಆಫ್ರಿಕಾ, ಅಮೆರಿಕಾ, ಚೀನಾ ಸೇರಿದಂತೆ ಪ್ರಪಂಚದ ನಾನಾ ದೇಶಗಳ ಪ್ರಮುಖರ ನಗುವನ್ನು ಇಲ್ಲಿ ಅನಾವರಣ ಮಾಡಲಾಗಿದೆ.

ಪ್ರದರ್ಶನದಲ್ಲಿ ದೀಪಿಕಾ ಪ್ರತಿಮೆ

ಆ ಪ್ರತಿಮೆಯಲ್ಲಿ ನಗುಮುಖದ ದೀಪಿಕಾ ತಲೆ ಕೂದಲಿ ತುರುಬು ಕಟ್ಟಿದ್ದು, ಕೊರಳಿಗೆ ದೊಡ್ಡದಾದ ನೆಕ್ಲೆಸ್​​ ಹಾಕಿದ್ದಾರೆ. 'ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ ನಗು' ಎಂದು ಪ್ರತಿಮೆಯ ಕೆಳಗೆ ಬರೆಯಲಾಗಿದೆ.

ಅಥೆನ್ಸ್​​ ವಿಮಾನ ನಿಲ್ದಾಣವು ಕೊರೊನಾ ಲಾಕ್​ಡೌನ್​ ನಂತ್ರ ತೆರೆಯಲಾಗುತ್ತಿದ್ದು, ಪ್ರವಾಸಿಗರನ್ನು ಸ್ವಾಗತಿಸಲು ಈ ರೀತಿಯ ಪ್ರದರ್ಶನಗಳನ್ನು ಮಾಡುತ್ತಿದೆ.

ABOUT THE AUTHOR

...view details