ನಟ - ನಟಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಪದಗಳಿಂದ ಕಿರುಕುಳ ಕೊಡುವ ಸುದ್ದಿ ಆಗ ಆಗಾಗ್ಗೆ ಕೇಳುತ್ತಲೇ ಇವೆ. ಇದೀಗ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ಅವಮಾನಿಸಿದ್ದಾರೆ.
ತನ್ನನ್ನು ಅವಮಾನಿಸಿದ ವ್ಯಕ್ತಿಯನ್ನು ಟ್ರೋಲ್ ಮಾಡಿದ್ರು ದೀಪಿಕಾ! - deepika padukone latest news
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ನಿಂದಿಸಿದ್ದು, ನಟಿಯ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ.

ತನ್ನನ್ನು ಅವಮಾನಿಸಿದ ವ್ಯಕ್ತಿಯನ್ನೇ ಟ್ರೋಲ್ ಮಾಡಿದ್ರು ದೀಪಿಕಾ!
ಹೀಗೆ ಅವಹೇಳಕಾರಿಯಾಗಿ ನಿಂದಿಸಿರುವ ವ್ಯಕ್ತಿಗೆ ನಟಿ ದೀಪಿಕಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು, ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೇ ಆ ವ್ಯಕ್ತಿ ನಿಂದಿಸಿರುವ ಕಮೆಂಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಕಮೆಂಟ್ ಬಗ್ಗೆ ಉತ್ತರ ನೀಡಿರುವ ನಟಿ, "ವಾಹ್! ನಿಮ್ಮ ಕುಟುಂಬ ಮತ್ತು ಸ್ನೇಹಿತರು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡಬೇಕು ಎಂದಿದ್ದಾರೆ.