ಕರ್ನಾಟಕ

karnataka

ETV Bharat / sitara

ಕೈ ಕೊಟ್ಟ ಅದೃಷ್ಟ ಅವಕಾಶಕ್ಕಾಗಿ ಕಾಯ್ತಿರೋ ಕನ್ನಡದ ದೀಪಿಕಾ ಪಡುಕೋಣೆ - ಶರಣ್ ಅಭಿನಯದ ಸತ್ಯಹರಿಶ್ಚಂದ್ರ

ಕನ್ನಡದ ದೀಪಿಕಾ ಪಡುಕೋಣೆ ಎಂದು ಕರೆಯಲ್ಪಡುವ ಸಂಚಿತಾ ಪಡುಕೋಣೆ ಲೂಸ್ ಮಾದ ಯೋಗಿ ಅಭಿನಯದ ರಾವಣ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ರು. ಆದ್ರೆ ಈ ಚಿತ್ರ ಅವರಿಗೆ ಅಷ್ಟು ಸಕ್ಸಸ್​ ಕೊಡಲಿಲ್ಲ. ಇದೀಗ ಅವರು ಅಭಿನಯದ ಈಗ ಮುತ್ತುಕುಮಾರ ಚಿತ್ರ ರಿಲೀಸ್​​ಗೆ ರೆಡಿಯಾಗಿದ್ದು ಒಂದು ಬ್ರೇಕ್​ಗಾಗಿ ಸಂಚಿತ ಕಾಯ್ತಿದ್ದು ಮುತ್ತುಕುಮಾರ ಚಿತ್ರ ಒಳ್ಳೆ ಬ್ರೇಕ್ ಕೊಡುತ್ತೆ ಎಂಬ ಭರವಸೆಯಲ್ಲಿದ್ದಾರೆ.

ಅವಕಾಶಕ್ಕಾಗಿ ಕಾಯ್ತಿರೋ ಕನ್ನಡದ ದೀಪಿಕಾ ಪಡುಕೋಣೆ

By

Published : Oct 16, 2019, 4:44 AM IST

ಲೂಸ್ ಮಾದ ಯೋಗಿ ಅಭಿನಯದ ರಾವಣ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದ ಮುದ್ದು ಮುಖದ ಚೆಲುವೆ ಸಂಚಿತಾ ಪಡುಕೋಣೆ, ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ರು. ಆದ್ರೆ ರಾವಣ ಚಿತ್ರ ಹೇಳಿ ಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ಜೊತೆಗೆ ಸಂಚಿತಾ ಪಡುಕೋಣೆಗೆ ಅವಕಾಶಗಳು ಅಷ್ಟಾಗಿ ಸಿಗಲಿಲ್ಲ.

ಇದೇ ಗ್ಯಾಪ್​ನಲ್ಲಿ ‌ಶರಣ್ ಅಭಿನಯದ ಸತ್ಯಹರಿಶ್ಚಂದ್ರ, ಮುತ್ತುಕುಮಾರ ಎಂಬ ಚಿತ್ರಗಳಲ್ಲಿ ಸಂಚಿತಾಗೆ ಅವಕಾಶ ಸಿಕ್ತು. ಸತ್ಯ ಹರಿಶ್ವಂದ್ರ ಚಿತ್ರದಲ್ಲೂ ಸಂಚಿತಾಗೆ ಅದೃಷ್ಟ ಕೈ ಕೊಟ್ಟಿತು. ಈಗ ಮುತ್ತುಕುಮಾರ ಚಿತ್ರ ರಿಲೀಸ್​​ಗೆ ರೆಡಿಯಾಗಿದ್ದು ಒಂದು ಬ್ರೇಕ್​ಗಾಗಿ ಸಂಚಿತ ಕಾಯ್ತಿದ್ದು ಮುತ್ತುಕುಮಾರ ಚಿತ್ರ ಒಳ್ಳೆ ಬ್ರೇಕ್ ಕೊಡುತ್ತೆ ಎಂಬ ಭರವಸೆಯಲ್ಲಿದ್ದಾರೆ.

ಅವಕಾಶಕ್ಕಾಗಿ ಕಾಯ್ತಿರೋ ಕನ್ನಡದ ದೀಪಿಕಾ ಪಡುಕೋಣೆ

ಇತ್ತೀಚೆಗೆ ನಡೆದ ಮುತ್ತುಕುಮಾರ ಆಡಿಯೋ ಲಾಂಚ್​ನಲ್ಲಿ ಮಾತನಾಡಿದ ಸಂಚಿತ, ನನ್ನನು ಎಲ್ಲಾರು ದೀಪಿಕಾ ಪಡುಕೋಣೆ ತರ ಇದ್ದೀರಾ ಅಂತಾರೆ. ಅದರೆ ನಾನು ಮಾಡಿದ ಯಾವ ಪಾತ್ರಗಳು ಕೂಡ ಇನ್ನೂ ಜನರ‌ ಮನಸ್ಸಿಗೆ ಹತ್ತಿರವಾಗಿಲ್ಲ.ಇನ್ನೂ ಜನರ ಮನಸ್ಸಿಗೆ ರೀಚ್ ಅಗುವುದಕ್ಕೆ ನಾನು ಸಾಕಷ್ಟು ಪ್ರಯತ್ನ ಪಡ್ತಿದ್ದೀನಿ. ಖಂಡಿತಾ ನನಗೆ ಯಶಸ್ಸು ಸಿಕ್ಕೆ ಸಿಗುತ್ತೆ.

ರಾವಣ, ಸತ್ಯ ಹರಿಶ್ಚಂದ್ರ ಹಾಗೂ‌ ಮುತ್ತುಕುಮಾರ ಎಲ್ಲಾ ಚಿತ್ರಗಳಲ್ಲೂ ನಾನು ಡಿಫರೆಂಟ್ ಪಾತ್ರಗಳನ್ನೆ ಮಾಡಿದೆ. ಯಾಕೋ ಗೊತ್ತಿಲ್ಲ ಅಭಿಮಾನಿಗಳು ನನ್ನ ಅಕ್ಸೆಪ್ಟ್ ಮಾಡಿಕೊಳ್ಳಲಿಲ್ಲ. ಅವರಿಗೆ ಇಷ್ಟವಾದ್ರೆ ಮಾತ್ರ ನಾವು ಸ್ಟಾರ್​​ಗಳಾಗೋದು. ಅಲ್ಲದೆ ನಾನು ಹೆಚ್ಚು ಕನ್ನಡ ಚಿತ್ರಗಳನ್ನೆ ಮಾಡಬೇಕೆಂದುಕೊಂಡು ಒಳ್ಳೆ ಪ್ರಾಜೆಕ್ಟ್​​ಗಾಗಿ ಕಾಯ್ತಿದ್ದೇನೆ ಎಂದು ಸಂಚಿತ ಪಡುಕೋಣೆ ಹೇಳಿದರು.

ABOUT THE AUTHOR

...view details