ಬಿಗ್ ಬಾಸ್ ಮನೆಯಲ್ಲಿ ಊಹಾಪೋಹಗಳಿಗೆ, ಪ್ರೀತಿ-ಸ್ನೇಹಗಳಿಗೇನೂ ಕಡೆಮೆ ಇಲ್ಲ. ಆ ದೊಡ್ಮನೆಗೆ ಹೋಗ್ತಾ ಇದ್ದಂತೆ ಕೆಲವರ ಮೇಲೆ ಕೆಲವರಿಗೆ ಕ್ರಶ್ ಆಗತ್ತೆ. ಇನ್ನು ಕೆಲವರಿಗೆ ಲವ್ ಆಗತ್ತೆ. ಇದೀಗ ಯಾರಿಗೆ ಯಾರ ಮೇಲೆ ಲವ್ ಆಗಿದೆ ಅಂದ್ರಾ..
ಲವ್ವು ಗಿವ್ವು ಏನಿಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿರುವ ಆ ಚಂದುಳ್ಳಿ ಚೆಲುವೆ ಚಂದನ, ಶೈನ್ ಶೆಟ್ರು ಮತ್ತು ದೀಪಿಕಾ ದಾಸ್ ನಡುವೆ ಸಂಬಂಧ ಬೆಳೆಸುತ್ತಿದ್ದಾಳೆ.
ಅರೆ ಇದ್ಹೇಗೆ ಅಂದ್ರಾ.. ರೀಸನ್ ಇದೆ ಸ್ವಾಮಿ. ಇತ್ತೀಚೆಗೆ ಬಿಗ್ ಬಾಸ್ ದೀಪಿಕಾ ದಾಸ್ಗೆ ಒಂದು ಟಾಸ್ಕ್ ಕೊಟ್ಟಿದೆ. ಅದೇನಂದ್ರೆ ಬಿಗ್ ಬಾಸ್ ಮನೆಯಿಂದ ಹೊರಗೋಗುವಷ್ಟರಲ್ಲಿ ಶೈನ್ ಶೆಟ್ಟಿಯ ಗಡ್ಡ ತೆಗಿಸುವುದು.