ಕರ್ನಾಟಕ

karnataka

ETV Bharat / sitara

ಬಿಗ್​​​ ಬಾಸ್ ಮನೆಯ ಈ ಬೆಡಗಿ ವೀಕೆಂಡ್​​​ ಬಂದ್ರೆ ಆಗ್ತಾರೆ ಕಲರ್​​ಫುಲ್​​! - big boss season 7

ಪ್ರತಿ ದಿನ ಸ್ಟೈಲಿಶ್​​ ಉಡುಪು ತೊಡುವ ದೀಪಿಕಾ ದಾಸ್​​ ವೀಕೆಂಡ್​ ಬಂದ್ರೆ ಬ್ಯೂಟಿಪಾರ್ಲರೇ ಬಂತೇನೋ ಎನ್ನುವ ಹಾಗೆ ರೆಡಿಯಾಗುತ್ತಾರೆ. ಪ್ರತಿ ವೀಕೆಂಡ್​ನಲ್ಲಿ ನಡೆಯುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಅಂದಚಂದದ ಬಟ್ಟೆ ತೊಟ್ಟು ಗಮನ ಸೆಳೆಯುತ್ತಾರೆ.

ದೀಪಿಕಾ ದಾಸ್

By

Published : Nov 10, 2019, 12:47 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದಾಗಿದೆ. ತಮ್ಮ ಗ್ಲಾಮರ್​ಗೆ ಹೆಸರುವಾಸಿಯಾಗಿರುವ ದೀಪಿಕಾ, ದೊಡ್ಮನೆಯೊಳಗೂ ಮಿರಿ ಮಿರಿ ಮಿಂಚುತ್ತಿದ್ದಾರೆ.

ದೀಪಿಕಾ ದಾಸ್

ಹೌದು, ಪ್ರತಿ ದಿನ ಸ್ಟೈಲಿಶ್​​ ಉಡುಪು ತೊಡುವ ಈ ಚಲುವೆ ವೀಕೆಂಡ್​ ಬಂದ್ರೆ ಬ್ಯೂಟಿಪಾರ್ಲರೇ ಬಂತೇನೋ ಎನ್ನುವ ಹಾಗೆ ರೆಡಿಯಾಗುತ್ತಾರೆ. ಪ್ರತಿ ವೀಕೆಂಡ್​ನಲ್ಲಿ ನಡೆಯುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಅಂದಚಂದದ ಬಟ್ಟೆ ತೊಟ್ಟು ಗಮನ ಸೆಳೆಯತ್ತಾರೆ. ಈ ಬೆಡಗಿಯ ಅಂದಕ್ಕೆ ಬಿಗ್​ ಬಾಸ್​​ ಮನೆಯಲ್ಲಿರುವ ಶೈನ್​ ಶೆಟ್ಟಿ ಮರುಳಾಗಿದ್ದಾರೆ.

ದೀಪಿಕಾ ದಾಸ್

ಇನ್ನು ಈ ವಾರದ ಕಿಚ್ಚನ ಕ್ಲಾಪ್​ ದೀಪಿಕಾ ದಾಸ್​ಗೆ ಸಿಕ್ಕಿದೆ. ವಾರವಿಡೀ ನಡೆದಿರುವ ಟಾಸ್ಕ್​​ನಲ್ಲಿ ತಮ್ಮ ಉತ್ತಮ ಪ್ರದರ್ಶನ ತೋರಿ ಸುದೀಪ್​ರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ದೊಡ್ಮನೆಯ ಫ್ಯಾಷನ್ ಐಕಾನ್ ಆಗಿರುವ ದೀಪಿಕಾ ಅವರಿಗೆ ಯೂನಿಕ್ ಡ್ರೆಸ್ ಧರಿಸುವುದೆಂದರೆ ತುಂಬಾ ಇಷ್ಟ. ಅಲ್ಲದೇ ದೀಪಾವಳಿ ಹಬ್ಬದಂದು ಅವರು ಧರಿಸಿದ ಟ್ರಾನ್ಸ್​ಪರೆಂಟ್ ಸಾರಿ ಎಲ್ಲರ ಗಮನ ಸೆಳೆದಿತ್ತು. ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಧರಿಸುವ ಬಟ್ಟೆಗಳನ್ನು 19 ವರ್ಷದ ಅತೀ ಸಣ್ಣ ಫ್ಯಾಷನ್ ಡಿನೈನರ್ ಸಾಗರ್ ಎಂಬುವರು ರೆಡಿ ಮಾಡಿ ಕೊಟ್ಟಿದ್ದಾರೆ.

ದೀಪಿಕಾ ದಾಸ್
ದೀಪಿಕಾ ದಾಸ್

ಇನ್ನು ಬಿಗ್ ಬಾಸ್ ಶೋ ಆರಂಭವಾಗುವ ಮೊದಲೇ ಸಾಗರ್ ಜೊತೆ ಮಾತನಾಡಿರುವ ದೀಪಿಕಾ, ಡಿಸೈನರ್ ವೇರ್ ಬೇಕು ಎಂದು ಹೇಳಿದ್ದರಂತೆ. ಅದರಂತೆ 20ರಿಂದ 30 ಜೊತೆ ಬಟ್ಟೆಗಳನ್ನು ಡಿಸೈನ್ ಮಾಡಿ ಕೊಟ್ಟಿದ್ದ ಸಾಗರ್ ಅವರಿಗೂ ಕೂಡ ದೀಪಿಕಾ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ. ಸಾಗರ್ ಡಿಸೈನ್ ಮಾಡಿ ಕೊಟ್ಟಿರುವ ಬಟ್ಟೆಗಳಲ್ಲಿ ಹೆಚ್ಚಿನವು ಸಾರಿಗಳಂತೆ. ವಾರಾಂತ್ಯದಲ್ಲಿ ಬರುವ ಎಪಿಸೋಡ್​​ಗಳಿಗೆಂದೇ ವಿಶೇಷವಾಗಿ ಸಾರಿ, ಲೆಹಂಗಾ, ಗೌನ್​ಗಳನ್ನು ಡಿಸೈನ್ ಮಾಡಲಾಗಿದೆಯಂತೆ.

https://etvbharatimages.akamaized.net/etvbharat/prod-images/5018605_thumb7.png

ABOUT THE AUTHOR

...view details