ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿರುವ ದೀಪಿಕಾಗೆ ಜನಪ್ರಿಯತೆ ತಂದು ಕೊಟ್ಟಿದ್ದು ನಾಗಿಣಿ ಧಾರಾವಾಹಿ. ನಾಗಿಣಿ ಧಾರಾವಾಹಿಯಲ್ಲಿ ನಾಗಲೋಕದ ಕನ್ಯೆ ಅಮೃತಾ ಆಗಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ಅವರ ಅಭಿನಯಕ್ಕೆ ಮನಸೋಲದವರಿಲ್ಲ.
ನಾಗಿಣಿ ಭಾಗ ಒಂದು ಸೀಸನ್ ಮುಗಿದು, ಇದೀಗ ಎರಡನೇ ಸೀಸನ್ ಪ್ರಸಾರ ಕಾಣುತ್ತಿದೆ. ಈಗೇಕೆ ದೀಪಿಕಾ ದಾಸ್ ಹೆಸರು ಎಂದು ಆಶ್ಚರ್ಯ ಆಗುತ್ತಿದೆಯಾ? ಇಲ್ಲಿದೆ ನೋಡಿ ಟ್ವಿಸ್ಟ್! ಅಮೃತಾಳಾಗಿ ಮೋಡಿ ಮಾಡಿದ್ದ ದೀಪಿಕಾ ದಾಸ್ ಮಗದೊಮ್ಮೆ ಕಿರುತೆರೆಗೆ ಮರಳಿ ಬರುತ್ತಿದ್ದಾರೆ. ಅದು ಕೂಡ ನಾಗಿಣಿಯಾಗಿ!ಅಂದ ಮಾತ್ರಕ್ಕೆ ನಾಗಿಣಿ ಪಾತ್ರಧಾರಿ ಬದಲಾಗುತ್ತಾರಾ? ನಮ್ರತಾ ಜಾಗಕ್ಕೆ ದೀಪಿಕಾ ಬರುತ್ತಾರಾ ಎಂದು ಆಲೋಚಿಸುತ್ತಿದ್ದರೆ ಅದು ಅಕ್ಷರಶಃ ಸುಳ್ಳು.