ನಾಗಿಣಿ ಧಾರಾವಾಹಿಯ ಅಮೃತಾಳಾಗಿ ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದ ದೀಪಿಕಾ ಬಗ್ಗೆ ವಿಶೇಷವಾಗಿ ಹೇಳಬೇಕೆಂದೇನಿಲ್ಲ. ಲಾಕ್ ಡೌನ್ ನಂತರ ದೀಪಿಕಾ ದಾಸ್ ನಟಿಯಿಂದ ಉದ್ಯಮಿಯಾಗಿ ಭಡ್ತಿ ಪಡೆದಿರುವುದು ಕೂಡಾ ತಿಳಿದೇ ಇದೆ. ಇಂತಿಪ್ಪ ಬೆಡಗಿ ಇದೀಗ ಸಂತಸದಿಂದ ಕಾಲ ಕಳೆಯಲು ಪಾಂಡಿಚೇರಿಗೆ ಹೋಗಿದ್ದಾರೆ. ಮತ್ತು ಸುಂದರ ಪರಿಸರದ ನಡುವೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಪಾಂಡಿಚೇರಿ ಕಡಲಲ್ಲಿ ಮಿಂದೆದ್ದ ನಾಗಿಣಿ... ಕಿನಾರೆಯಲ್ಲಿ ವಾಕ್ ಮಾಡುತ್ತಾ ಸಖತ್ ಎಂಜಾಯ್ - ದೀಪಿಕಾ ದಾಸ್ ಪಾಂಡಿಚರಿಯ ಪ್ರವಾಸ
ಅಂದದ ಬೆಡಗಿ ದೀಪಿಕಾ ದಾಸ್ ಇದೀಗ ಸಂತಸದಿಂದ ಕಾಲ ಕಳೆಯಲು ಪಾಂಡಿಚೇರಿಗೆ ಹೋಗಿದ್ದಾರೆ. ಮತ್ತು ಸುಂದರ ಪರಿಸರದ ನಡುವೆ ಸಕತ್ ಎಂಜಾಯ್ ಮಾಡುತ್ತಿದ್ದಾರೆ.
ಪಾಂಡಿಚೇರಿಯ ಸುಂದರ ಗಳಿಗೆಗಳನ್ನು ಸೆರೆ ಹಿಡಿದಿರುವ ದೀಪಿಕಾ ದಾಸ್ ಅದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಒಂದಷ್ಟು ವಿಡಿಯೋಗಳನ್ನು ಕೂಡಾ ದೀಪಿಕಾ ಅಪ್ ಲೋಡ್ ಮಾಡಿದ್ದಾರೆ. ಪಯಣೋತ್ಸಾಹಿ ಆಗಿರುವ ದೀಪಿಕಾ ಪಾಂಡಿಚೇರಿಯ ತಾಣಗಳನ್ನು ಪರಿಚಯಿಸಿದ್ದಾರೆ. ಸಮುದ್ರದಲ್ಲಿ ವಾಕ್ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ತುಂಬಾ ಚೆನ್ನಾಗಿ ಸಮಯ ಕಳೆದಿದ್ದಾರೆ. ಇದರ ಜೊತೆಗೆ ಅಲ್ಲಿನ ಹಲವು ಅಡುಗೆಗಳನ್ನು ಸವಿದಿದ್ದಾರೆ.
ನಟನೆಯಿಂದ ಸಣ್ಣ ಬ್ರೇಕ್ ಪಡೆದುಕೊಂಡಿರುವ ದೀಪಿಕಾ ಉದ್ಯಮದತ್ತ ಮುಖ ಮಾಡಿದ್ದರು. ಫ್ಯಾಶನಿಸ್ಟ್ ಆಗಿರುವ ದೀಪಿಕಾ ತನ್ನದೇ ಆದ ಫ್ಯಾಶನ್ ಲೇಬಲ್ ಹೊಂದಿದ್ದಾರೆ. ಡಿ ದಾಸ್ ಫ್ಯಾಷನ್ಸ್ ಆರಂಭಿಸಿರುವ ಇವರು ಔಟ್ ಫಿಟ್ಗಳನ್ನು ವಿನ್ಯಾಸ ಮಾಡುವ ದೀಪಿಕಾ ಕ್ಯಾಸುವಲ್ಸ್ ಬಟ್ಟೆಗಳಿಂದ ಹಿಡಿದು ಪಾರ್ಟಿ ವೇರ್ಗಳವರೆಗೂ ಡಿಸೈನ್ ಮಾಡುತ್ತಾರೆ.