ಇಡೀ ವಿಶ್ವವೇ ಕೊರೊನಾ ವೈರಸ್ ದಾಳಿಯಿಂದ ತತ್ತರಿಸುತ್ತಿದೆ. ಜನಸಾಮಾನ್ಯರು, ಸೆಲಬ್ರಿಟಿಗಳು ಕೆಲಸ ಬಿಟ್ಟು ಮನೆಯಲ್ಲೇ ಕುಳಿತಿದ್ದಾರೆ. ಇನ್ನು ದಿನಕೂಲಿ ನೌಕರರು ಈ ಲಾಕ್ ಡೌನ್ನಿಂದ ಒಂದು ಹೊತ್ತಿನ ಊಟಕ್ಕೆ ಕೂಡಾ ಕಷ್ಟಪಡುತ್ತಿದ್ದಾರೆ. ಈ ವೇಳೆ ಬಡವರಿಗೆ ಸಹಾಯ ಮಾಡಲು ಎಷ್ಟೋ ಸಂಘಸಂಸ್ಥೆಗಳು ಹಾಗೂ ಸೆಲಬ್ರಿಟಿಗಳು ಮುಂದೆ ಬಂದಿದ್ದಾರೆ.
ಕಷ್ಟಕ್ಕೆ ಸ್ಪಂದಿಸಿದ ನಾಗಿಣಿ...ಕೊರೊನಾ ಪರಿಹಾರ ನಿಧಿಗೆ ಹಣಸಹಾಯ ಮಾಡಿದ ದೀಪಿಕಾ - Deepika das donated money to corona Relief Fund
'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಕೂಡಾ ಇದೀಗ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ದೀಪಿಕಾ ದಾಸ್ 5 ಲಕ್ಷ ರೂಪಾಯಿ ಹಣವನ್ನು ನೀಡಲು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರ ಮಾಡಲಿದ್ದಾರೆ.
![ಕಷ್ಟಕ್ಕೆ ಸ್ಪಂದಿಸಿದ ನಾಗಿಣಿ...ಕೊರೊನಾ ಪರಿಹಾರ ನಿಧಿಗೆ ಹಣಸಹಾಯ ಮಾಡಿದ ದೀಪಿಕಾ Deepika das](https://etvbharatimages.akamaized.net/etvbharat/prod-images/768-512-6610179-874-6610179-1585657321897.jpg)
'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಕೂಡಾ ಇದೀಗ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ದೀಪಿಕಾ ದಾಸ್ 5 ಲಕ್ಷ ರೂಪಾಯಿ ಹಣವನ್ನು ನೀಡಲು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ದೀಪಿಕಾ ದಾಸ್, ಕೊರೊನಾ ಸಮಸ್ಯೆ ಬಗೆಹರಿಸುವಲ್ಲಿ ಸಿಎಂ ಯಡಿಯೂರಪ್ಪ ಬ್ಯುಸಿ ಇದ್ದಾರೆ. ಆದ್ದರಿಂದ ಅವರನ್ನು ಇದುವರೆಗೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇನ್ನು 2-3 ದಿನಗಳಲ್ಲಿ ಅವರನ್ನು ಭೇಟಿ ಮಾಡಿ ಅವರಿಗೆ ಈ ಚೆಕ್ ನೀಡಲಿದ್ಧೇನೆ ಎಂದಿದ್ದಾರೆ.
ದೀಪಿಕಾ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿ ಹೊರ ಬಂದ ನಂತರ ಮತ್ತಷ್ಟು ಖ್ಯಾತಿ ಪಡೆದಿದ್ದಾರೆ. ಇನ್ನು ಪ್ರತಿದಿನ ಸಿನಿಮಾ ತಾರೆಯರು ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದುಇತ್ತೀಚೆಗಷ್ಟೇ ನಟ ಪುನೀತ್ ರಾಜ್ಕುಮಾರ್ ಕೂಡಾ ಮುಖ್ಯಮಂತ್ರಿ ಅವರ ಧವಳಗಿರಿ ನಿವಾಸಕ್ಕೆ ತೆರಳಿ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.