ಬಿಗ್ ಬಾಸ್ ಸೀಸನ್-7ರಲ್ಲಿ ಸ್ಪರ್ಧಿಯಾಗಿ ಕಾಣಿಸಿದ್ದ ದೀಪಿಕಾ ದಾಸ್ ಹಾಗೂ ಕಿಶನ್ ಬಿಳಗಲಿ ಈ ಶೋನಿಂದಾಗಿ ಉತ್ತಮ ಸ್ನೇಹಿತರಾಗಿದ್ದರು. ದೊಡ್ಮನೆಯಿಂದ ಹೊರ ಬಂದ ಬಳಿಕವೂ ಇವರ ಸ್ನೇಹ ಮುಂದುವರಿದಿದೆ. ಸದ್ಯದಲ್ಲಿಯೇ ಈ ಜೋಡಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ನಂತರ ಮೊದಲ ಬಾರಿ ಈ ಸ್ನೇಹಿತರು ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದು ಮಸ್ತ್ ಮಜಾ ಮಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಚಾಟ್ ಕಾರ್ನರ್' ಕಾರ್ಯಕ್ರಮದ ಇಂದಿನ ಸಂಚಿಕೆಯಲ್ಲಿ ಈ ಬೆಸ್ಟ್ ಫ್ರೆಂಡ್ಸ್ ಜೊತೆಯಾಗಿ ಕಾಣಿಸಿದ್ದಾರೆ. ಇನ್ನು ಕಿಶನ್ ಬಿಳಗಲಿ ಹಾಗೂ ದೀಪಿಕಾ ದಾಸ್ ತಮ್ಮ ಕೆರಿಯರ್, ಬಣ್ಣದ ಜೀವನ ಹಾಗೂ ಗೆಳೆತನದ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೇ ಬಿಗ್ ಬಾಸ್ಗೆ ಬಂದ ಮೇಲೆ ಬದುಕಿನಲ್ಲಿ ಆದ ಬದಲಾವಣೆಗಳ ಕುರಿತು ಮಾತನಾಡಲಿದ್ದಾರೆ.