ಕರ್ನಾಟಕ

karnataka

ETV Bharat / sitara

'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಕನ್ನಡಕ್ಕೆ ಬಂದ ದೀಪ ಜಗದೀಶ್​​ - ಕ್ರಿಟಿಕಲ್ ಕೀರ್ತನೆಗಳು ಧಾರಾವಾಹಿಯಲ್ಲಿ ದೀಪ ನಟನೆ

'ಕ್ರಿಟಿಕಲ್ ಕೀರ್ತನೆಗಳು' ನಾಲ್ಕು ಕಥೆಗಳನ್ನು ಹೊಂದಿರುವ ಸಿನಿಮಾ. 'ಲವ್​​ಬರ್ಡ್​' ಎಂಬ ಭಾಗದಲ್ಲಿ ದೀಪ ಜಗದೀಶ್​, ಯಶಸ್ ಎಂಬುವವರ ಜೊತೆ ಅಭಿನಯಿಸಿದ್ದಾರೆ. ದೀಪ ಮೂಲತ: ಧಾರವಾಡ ಮೂಲದ ಹುಡುಗಿ. ತಬಲಾ ನಾಣಿ ಹಾಗೂ ಅಪೂರ್ವ ಈ ನಾಲ್ಕೂ ಕಥೆಗಳಿಗೆ ಪ್ರಮುಖ ಪಾತ್ರಧಾರಿಗಳು.

Deepa jagadish
ದೀಪ ಜಗದೀಶ್​​

By

Published : Jan 25, 2020, 10:47 AM IST

ಕನ್ನಡ ಸಿನಿಮಾ ‘ಕ್ರಿಟಿಕಲ್ ಕೀರ್ತನೆಗಳು’ ಮೂಲಕ ತೆಲುಗು ಧಾರಾವಾಹಿ ‘ಪ್ರೇಮನಗರ’ದ ನಟಿ ದೀಪ ಜಗದೀಶ್ ಕನ್ನಡಕ್ಕೆ ಬಂದಿದ್ದಾರೆ. ದೀಪ ಇದುವರೆಗೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ‘ಪ್ರೇಮನಗರ’ ಧಾರಾವಾಹಿ.

'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಕನ್ನಡಕ್ಕೆ ಬಂದ ದೀಪ

'ಕ್ರಿಟಿಕಲ್ ಕೀರ್ತನೆಗಳು' ನಾಲ್ಕು ಕಥೆಗಳನ್ನು ಹೊಂದಿರುವ ಸಿನಿಮಾ. 'ಲವ್​​ಬರ್ಡ್​' ಎಂಬ ಭಾಗದಲ್ಲಿ ದೀಪ ಜಗದೀಶ್​, ಯಶಸ್ ಎಂಬುವವರ ಜೊತೆ ಅಭಿನಯಿಸಿದ್ದಾರೆ. ದೀಪ ಮೂಲತ: ಧಾರವಾಡ ಮೂಲದ ಹುಡುಗಿ. ತಬಲಾ ನಾಣಿ ಹಾಗೂ ಅಪೂರ್ವ ಈ ನಾಲ್ಕೂ ಕಥೆಗಳಿಗೆ ಪ್ರಮುಖ ಪಾತ್ರಧಾರಿಗಳು. ದೀಪ ಜಗದೀಶ್ ಹಾಗೂ ಯಶಸ್ ಅಭಿ ಪಾತ್ರವನ್ನು ಮಂಗಳೂರು ಪ್ರಾಂತ್ಯಕ್ಕೆ ಹೊಂದಿಸಲಾಗಿದೆ. ದೀಪ ಜಗದೀಶ್ ಅವರಿಗೆ ಕನ್ನಡದಲ್ಲಿ ಸಿಕ್ಕಿರುವ ಈ ಪಾತ್ರ ಬಹಳ ವಿಶೇಷವಾಗಿದೆಯಂತೆ. ಕೇಸರಿ ಫಿಲ್ಮ್ ಕಪ್ಚರ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಕುಮಾರ್​. ಎಲ್​​​ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಇದು ಐಪಿಎಲ್ ಬೆಟ್ಟಿಂಗ್ ಕುರಿತಾದ ಚಿತ್ರವಾಗಿದೆ. ರೇಣುಕ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದೆ.

ದೀಪ ಮೂಲತ: ಧಾರವಾಡಕ್ಕೆ ಸೇರಿದ ಹುಡುಗಿ

ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೂರು ಹಾಡುಗಳಿಗೆ ವೀರ್ ಸಮರ್ಥ ರಾಗ ಸಂಯೋಜಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಕೂಡಾ ಕುಮಾರ್​​. ಎಲ್ ಅವರದ್ದೇ. ತಬಲಾ ನಾಣಿ-ಅಪೂರ್ವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಕೂಡಾ ಜೊತೆಯಾಗಿ ನಟಿಸಿದ್ದರು. ರಾಜೇಶ್ ನಟರಂಗ , ಅಪೂರ್ವ ಭಾರದ್ವಾಜ್ , ತರಂಗ ವಿಶ್ವ, ಸುಚೇಂದ್ರ ಪ್ರಸಾದ್, ಅರುಣ ಬಾಲ್​​​​​ರಾಜ್​​​, ಧರ್ಮ ದಿನೇಶ್​​​​​​, ಮಂಗಳೂರು, ರಘು ಪಾಂಡವೇಶ್ವರ್, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ ಹಾಗೂ ಇತರರು ತಾರಾಗಣದಲಿದ್ದಾರೆ.

ABOUT THE AUTHOR

...view details