ಕರ್ನಾಟಕ

karnataka

ETV Bharat / sitara

ಬೆಂಕಿಯಿಟ್ಟು ಆನೆ ಕೊಂದ ಪ್ರಕರಣ: ಮಾನವರು ಕೆಟ್ಟ ಜೀವಿಗಳು ಎಂದ ರಮ್ಯಾ - ನಟಿ ರಮ್ಯಾ

ತಮಿಳುನಾಡಿನಲ್ಲಿ ಒಂಟಿ ಸಲಗಕ್ಕೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ನಟಿ ಹಾಗೂ ರಾಜಕಾರಿಣಿ ರಮ್ಯಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಕಿಯಿಟ್ಟು ಆನೆ ಕೊಂದ ಘಟನೆ : ಮಾನವರು ಕೆಟ್ಟ ಜೀವಿಗಳು ಎಂದ ರಮ್ಯಾ
ಬೆಂಕಿಯಿಟ್ಟು ಆನೆ ಕೊಂದ ಘಟನೆ : ಮಾನವರು ಕೆಟ್ಟ ಜೀವಿಗಳು ಎಂದ ರಮ್ಯಾ

By

Published : Jan 24, 2021, 12:51 PM IST

ಕಾಡು ಪ್ರಾಣಿಗಳ ಮೇಲೆ ಆಗಿಂದಾಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ನಡೆಯುತ್ತಲೇ ಇವೆ. ಕಳೆದ ವರ್ಷ ಕೇರಳದಲ್ಲಿ ಸ್ಫೋಟಕವನ್ನಿಟ್ಟು ಕಿಡಿಗೇಡಿಗಳು ಗರ್ಭಿಣಿ ಆನೆಯೊಂದನ್ನು ಕೊಂದಿದ್ದರು. ಇದರ ನೋವು ಮಾಸುವ ಮುನ್ನವೇ ತಮಿಳುನಾಡಿನಲ್ಲಿ ಒಂಟಿ ಸಲಗಕ್ಕೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿದೆ.

ರಮ್ಯಾ

ಈ ಬಗ್ಗೆ ದೇಶಾದ್ಯಂತ ವ್ಯಾಪಕವಾಗಿ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ಆನೆಯು ಬೆಂಕಿಯಿಂದ ನರಳಿದ ವಿಡಿಯೋ ಸಾಕಷ್ಟು ವೈರಲ್​​ ಆಗಿದೆ. ಇದೇ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್​ ನಟಿ ಹಾಗೂ ರಾಜಕಾರಿಣಿ ರಮ್ಯಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮ್ಯಾ

ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದಿರುವ ನಟಿ ರಮ್ಯಾ ಏಕೆ? ಏಕೆ? ಏಕೆ? ಏಕೆ ?ನಾವು ಇಷ್ಟೊಂದು ಕ್ರೂರಿಗಳಾಗಬೇಕು. ದಯೆ ಮತ್ತು ಕರುಣೆ ಇಂದು ಇರಲು ಸಾಧ್ಯವಿಲ್ಲವೇ. ಭೂಮಿಯು ಪ್ರತಿಯೊಬ್ಬ ಜೀವಿಗೂ ಸೇರಿದೆ. ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ನಾವು ಯಾವಾಗ ಕಲಿಯುತ್ತೇವೆ. ಮಾನವರು ಈ ಭೂಮಿ ಮೇಲೆ ಇರುವ ಕೆಚ್ಚ ಜೀವಿಗಳು ಎಂದು ಬರೆದುಕೊಂಡಿದ್ದಾರೆ.

ಬೆಂಕಿಯಿಟ್ಟು ಆನೆ ಕೊಂದ ಘಟನೆ : ಮಾನವರು ಕೆಟ್ಟ ಜೀವಿಗಳು ಎಂದ ರಮ್ಯಾ

ಇದನ್ನೂ ಓದಿ : Watch:ಆಹಾರ ಅರಸಿ ಬಂದ ಗಜರಾಜನಿಗೆ ಬೆಂಕಿ ಹಚ್ಚಿದ ಮನುಜ; ನೋವಿನ ಘೀಳು ಕಲ್ಲು ಹೃದಯವ ಕರಗಿಸದಿರದು!

ಸದ್ಯ ರಮ್ಯಾ ನಟನೆಯಿಂದ ಹಾಗೂ ರಾಜಕೀಯದಿಂದ ಕೊಂಚ ದೂರವೇ ಉಳಿದಿದ್ದಾರೆ. ರಮ್ಯಾ ನಟಿಸಿದ ಕೊನೆಯ ಸಿನಿಮಾ ದಿಲ್​ ಕಾ ರಾಜ. ಅದಕ್ಕೂ ಮುಂಚೆ ನಾಗರಹಾವು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

ರಮ್ಯಾ

ABOUT THE AUTHOR

...view details