ಕರ್ನಾಟಕ

karnataka

ETV Bharat / sitara

ಡಿಯರ್‌ ಸತ್ಯ ಚಿತ್ರತಂಡದಿಂದ ನಟ, ದಿವಂಗತ ಸಂಚಾರಿ ವಿಜಯ್‌ಗೆ ಶ್ರದ್ದಾಂಜಲಿ - ಕರ್ನಾಟಕ

ಅಪಘಾತದಿಂದಾಗಿ ಇತ್ತೀಚೆಗೆ ನಿಧನರಾದ ಸ್ಯಾಂಡಲ್‌ವುಡ್‌ ನಟ ಸಂಚಾರಿ ವಿಜಯ್‌ಗೆ ಡಿಯರ್‌ ಸತ್ಯ ಚಿತ್ರತಂಡ ಸ್ಮರಿಸುವ ಕೆಲಸ ಮಾಡಿದೆ. ಚಲಚಿತ್ರ ವಾಣಿಜ್ಯ ಮಂಡಲಿಯಲ್ಲಿ ಸಂಚಾರಿ ವಿಜಯ್‌ ಅವರ ಫೋಟೋ ಇಟ್ಟು, ಮೆಣದ ಬತ್ತಿ ಬೆಳಗುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

dear sathya movie team remembered late sanchari vijay in bangalore film chamber
ಡಿಯರ್‌ ಸತ್ಯ ಚಿತ್ರತಂಡದಿಂದ ನಟ, ದಿವಂಗತ ಸಂಚಾರಿ ವಿಜಯ್‌ಗೆ ಶ್ರದ್ದಾಂಜಲಿ

By

Published : Jun 22, 2021, 3:38 AM IST

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನರಾಗಿ,ಎಂಟು ದಿನಗಳು ಕಳೆಯುತ್ತಿದೆ‌.ಆದರೆ ಸಂಚಾರಿ ವಿಜಯ್ ಮಾಡಿದ ಕೆಲಸಗಳು ಹಾಗು ವಿಜಯ್ ನಟಿಸಿರೋ ಸಿನಿಮಾಗಳು ಚಿತ್ರರಂಗ ಸ್ನೇಹಿತರನ್ನ ಹಾಗು ಆಪ್ತರನ್ನ ಕಾಡುತ್ತಿದೆ. ಇದೀಗ ಡಿಯರ್ ಸತ್ಯ ಚಿತ್ರತಂಡದ ನಾಯಕ ಆರ್ಯನ್ ಸಂತೋಷ್ ಅಂಡ್ ಟೀಮ್ ಸಂಚಾರಿ ವಿಜಯ್ ಸ್ಮರಿಸುವ ಕೆಲಸ ಮಾಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಚಾರಿ ವಿಜಯ್ ಫೋಟೋವನ್ನ ಇಟ್ಟು, ನಟ ಆರ್ಯನ್ ಸಂತೋಷ್, ನಟಿ ನೀತು ಅಂಡ್ ಟೀಮ್ , ಫಿಲ್ಮ್ ಚೇಂಬರ್ ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ಗೌರವ ಕಾರ್ಯದರ್ಶಿ ಎನ್, ಎಂ ಸುರೇಶ್, ನಿರ್ಮಾಪಕರಾದ ಭಾ,ಮಾ ಹರೀಶ್ ಸೇರಿದಂತೆ , ಫಿಲ್ಮ್ ಚೇಂಬರ್ ಪದಾಧಿಕಾರಿಗಳ ಸಮ್ಮುಖದಲ್ಲಿ, ಆರ್ಯನ್ ಸಂತೋಷ್, ನಟಿ ನೀತು ಮೇಣದ ಬತ್ತಿ ಹಚ್ಚುವ ಮೂಲಕ, ಸಂಚಾರಿ ವಿಜಯ್ ಅವರನ್ನು ಸ್ಮರಿಸಿದರು.

ಸಂಚಾರಿ ವಿಜಯ್ ಉಸಿರು ಎಂಬ ತಂಡದ ಜೊತೆ ಸೇರಿಕೊಂಡು ಕೊರೊನಾ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ್ದ ಕೆಲಸಗಳನ್ನ ಆರ್ಯನ್ ಸಂತೋಷ್ ಮೆಲುಕು ಹಾಕಿದರು. ಸಂಚಾರಿ ವಿಜಯ್ ಅಕಾಲಿಕ ಮರಣದಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಆಗಿದೆ ಅಂತಾ ಆರ್ಯನ್ ಸಂತೋಷ್ ಬೇಸರ ವ್ಯಕ್ತಪಡಿಸಿದ್ದರು.

ABOUT THE AUTHOR

...view details