ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ 'ಡಿಯರ್ ಕಾಮ್ರೇಡ್' ಸಿನಿಮಾ ಜುಲೈ 26 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ 3 ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.
ಅಭಿಮಾನಿಗಳನ್ನು ಇಂಪ್ರೆಸ್ ಮಾಡ್ತು 'ಡಿಯರ್ ಕಾಮ್ರೇಡ್' ಚಿತ್ರದ ಮದುವೆ ಮನೆ ಹಾಡು - undefined
'ಡಿಯರ್ ಕಾಮ್ರೇಡ್' ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ಮದುವೆ ಮನೆಯ ದೃಶ್ಯಗಳನ್ನು ಹೊಂದಿರುವ ಈ ಹಾಡು ಎಲ್ಲರಿಗೂ ಬಹಳ ಇಷ್ಟವಾಗಿದೆ.
![ಅಭಿಮಾನಿಗಳನ್ನು ಇಂಪ್ರೆಸ್ ಮಾಡ್ತು 'ಡಿಯರ್ ಕಾಮ್ರೇಡ್' ಚಿತ್ರದ ಮದುವೆ ಮನೆ ಹಾಡು](https://etvbharatimages.akamaized.net/etvbharat/prod-images/768-512-3642715-thumbnail-3x2-camrade.jpg)
ಇತ್ತೀಚೆಗೆ ಬಿಡುಗಡೆಯಾದ ಮದುವೆ ಮನೆ ಹಾಡು ಕೂಡಾ ಎಲ್ಲರನ್ನು ಬಹಳ ಇಂಪ್ರೆಸ್ ಮಾಡಿದೆ. 'ಗೀತಗೋವಿಂದಂ' ಸಿನಿಮಾದಲ್ಲಿ 'ವಚ್ಚಿಂದಮ್ಮ ವಚ್ಚಿಂದಮ್ಮ' ಮದುವೆ ಹಾಡು ಎಷ್ಟು ಫೇಮಸ್ ಆಗಿತ್ತೆಂದರೆ ಸಾಮಾನ್ಯ ಜನರು ಕೂಡಾ ತಮ್ಮ ಮದುವೆ ವಿಡಿಯೋಗೆ ಅದೇ ಹಾಡನ್ನು ಬಳಸಿಕೊಂಡಿದ್ದರು. ಈ ಹಾಡು ಇಂದಿಗೂ ಎಲ್ಲರ ಮೋಸ್ಟ್ ಫೇವರೆಟ್. ಇದೀಗ 'ಡಿಯರ್ ಕಾಮ್ರೇಡ್' ಸಿನಿಮಾ ಹಾಡು ಕೂಡಾ ಎಲ್ಲರಿಗೂ ಇಷ್ಟವಾಗಿದೆ.
ಜಸ್ಟಿನ್ ಪ್ರಭಾಕರ್ ಸಂಗೀತ ನೀಡಿರುವ 'ಗಿರ ಗಿರ ಗಿರ' ಮದುವೆ ಹಾಡಿನ ಸಾಹಿತ್ಯವನ್ನು ರೆಹಮಾನ್ ಬರೆದಿದ್ದಾರೆ. ಗೌತಮ್ ಭಾರಧ್ವಜ್ ಹಾಗೂ ಯಾಮಿನಿ ಪ್ರಭಾಕರನ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಅಭಿಮಾನಿಗಳು ಈ ಹಾಡನ್ನು ಬೆಳ್ಳಿ ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ಯಶ್ ರಂಗಿನೇನಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.