ಟಾಲಿವುಡ್ ಬಹುನಿರೀಕ್ಷಿತ ‘ಡಿಯರ್ ಕಾಮ್ರೇಡ್‘ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ‘ಗೀತಗೋವಿಂದಂ‘ ಸಿನಿಮಾದಲ್ಲಿ ಮೊದಲ ಬಾರಿ ಜೊತೆಗೆ ನಟಿಸಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿ ಈ ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ.
‘ಡಿಯರ್ ಕಾಮ್ರೇಡ್ ‘ ಮೊದಲ ಲಿರಿಕಲ್ ವಿಡಿಯೋ ರಿಲೀಸ್: ವರ್ಕೌಟ್ ಆಯ್ತು ಬಾಬ್ಬಿ, ಲಿಲ್ಲಿ ಕೆಮಿಸ್ಟ್ರಿ - undefined
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ ‘ಡಿಯರ್ ಕಾಮ್ರೇಡ್‘ ಮೊದಲ ಲಿರಿಕರ್ ವಿಡಿಯೋ ಬಿಡುಗಡೆಯಾಗಿದೆ. ಸಿದ್ ಶ್ರೀರಾಮ್, ಐಶ್ವರ್ಯ ರವಿಚಂದ್ರನ್ ಸುಮಧುರ ಕಂಠದಲ್ಲಿ ಈ ರೊಮ್ಯಾಂಟಿಕ್ ಗೀತೆ ಮೂಡಿಬಂದಿದೆ.
‘ಕಡಲಲ್ಲೇ ವೇಚೆ ಕನುಲೆ‘ ಎಂಬ ಸಾಲಿನಿಂದ ಆರಂಭವಾಗುವ ಈ ರೊಮ್ಯಾಂಟಿಕ್ ಹಾಡನ್ನು ಸಿದ್ ಶ್ರೀರಾಮ್ ಹಾಗೂ ಐಶ್ವರ್ಯ ರವಿಚಂದ್ರನ್ ಹಾಡಿದ್ದಾರೆ. ರೆಹಮಾನ್ ಈ ಹಾಡಿನ ಸಾಹಿತ್ಯ ಬರೆದಿದ್ದು ಜಸ್ಟಿನ್ ಪ್ರಭಾಕರನ್ ಸಂಗೀತ ನೀಡಿದ್ದಾರೆ. ಈ ಲಿರಿಕ್ ವಿಡಿಯೋ ನೋಡಿದ ಮೇಲೆ ರಶ್ಮಿಕಾ, ವಿಜಯ್ ಅಭಿಮಾನಿಗಳಂತೂ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಮೊದಲ ಸಿನಿಮಾದಂತೆ ಈ ಸಿನಿಮಾದಲ್ಲಿ ಕೂಡಾ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಮಳೆಯ ದೃಶ್ಯಗಳನ್ನು ಬಹಳ ಚೆನ್ನಾಗಿ ಸೆರೆಹಿಡಿಯಲಾಗಿದೆ. ಈ ಹಾಡು ಕೇಳಿದವರು ಮಂತ್ರಮುಗ್ಧರಾಗುವುದು ಗ್ಯಾರಂಟಿ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ನವೀನ್ ಯರನೇನಿ, ವೈ. ರವಿಶಂಕರ್, ಮೋಹನ್ ಚೆರುಕುರಿ, ಯಶ್ ರಂಗಿನೇನಿ ನಾಲ್ವರೂ ಜೊತೆ ಸೇರಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಭರತ್ ಕಮ್ಮ ಈ ಚಿತ್ರದ ಕಥೆಯನ್ನು ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಬ್ಬಿ ಎಂಬ ಸ್ಟೂಡೆಂಟ್ ಲೀಡರ್ ಆಗಿ, ರಶ್ಮಿಕಾ ಲಿಲ್ಲಿ ಹೆಸರಿನ ಮಹಿಳಾ ಕ್ರಿಕೆಟರ್ ಆಗಿ ನಟಿಸಿದ್ದಾರೆ. ಸಿನಿಮಾ ಜುಲೈ 26 ರಂದು ಬಿಡುಗಡೆಯಾಗುತ್ತಿದೆ.