ಕರ್ನಾಟಕ

karnataka

ETV Bharat / sitara

'ಡೆಡ್ಲಿ ಅಫೇರ್' ಸಿನಿಮಾ ನಿರ್ದೇಶಕರಿಗೆ ಬಾಲಿವುಡ್​​​​​ನ ಆ ಖ್ಯಾತ ಸೆಲಬ್ರಿಟಿ ಸ್ಫೂರ್ತಿಯಂತೆ - ಫೆಬ್ರವರಿ 2020 ರಂದು ಡೆಡ್ಲಿ ಅಫೇರ್ ಬಿಡುಗಡೆ

'ಡೆಡ್ಲಿ ಅಫೇರ್​​​​​' ಚಿತ್ರಕ್ಕೆ ರಾಜೇಶ್ ಮೂರ್ತಿ ನಿರ್ದೇಶನ ಮಾಡಿದ್ದು ಹಿಂದಿಯ ಖ್ಯಾತ ನಿರ್ದೇಶಕ ಮಹೇಶ್​ ಭಟ್ ಸಿನಿಮಾಗಳ ಛಾಪು ಇದೆ ಎನ್ನಲಾಗುತ್ತಿದೆ. ನಾನು ಈ ಥ್ರಿಲ್ಲರ್ ಕಥಾವಸ್ತು ಇರುವ ಸಿನಿಮಾವನ್ನು ನಿರ್ದೇಶಿಸಲು ಮಹೇಶ್ ಭಟ್ ಅವರೇ ಸ್ಫೂರ್ತಿ ಎನ್ನುತ್ತಾರೆ ರಾಜೇಶ್​​​​​​​​.

Deadly Affair
ಡೆಡ್ಲಿ ಅಫೇರ್

By

Published : Jan 30, 2020, 9:25 AM IST

'ಡೆಡ್ಲಿ ಅಫೇರ್​​​​​' ಸಿನಿಮಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆಂಗ್ಲಭಾಷೆಯ ಶೀರ್ಷಿಕೆ ಇರುವ ಈ ಸಿನಿಮಾಗೆ ಹಿಂದಿ ಭಾಷೆಯ ಮೇಕಿಂಗ್ ಛಾಪು ನೀಡಲಾಗಿದೆ. ಚಿತ್ರದ ನಾಯಕಿ ಗುಂಜಾನ್ ಅರಸ್ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

'ಡೆಡ್ಲಿ ಅಫೇರ್'

ಈ ಚಿತ್ರಕ್ಕೆ ರಾಜೇಶ್ ಮೂರ್ತಿ ನಿರ್ದೇಶನ ಮಾಡಿದ್ದು ಹಿಂದಿಯ ಖ್ಯಾತ ನಿರ್ದೇಶಕ ಮಹೇಶ್​ ಭಟ್ ಸಿನಿಮಾಗಳ ಛಾಪು ಇದೆ ಎನ್ನಲಾಗುತ್ತಿದೆ. ನಾನು ಈ ಥ್ರಿಲ್ಲರ್ ಕಥಾವಸ್ತು ಇರುವ ಸಿನಿಮಾವನ್ನು ನಿರ್ದೇಶಿಸಲು ಮಹೇಶ್ ಭಟ್ ಅವರೇ ಸ್ಫೂರ್ತಿ ಎನ್ನುತ್ತಾರೆ ರಾಜೇಶ್​. ಈ ಸಿನಿಮಾ ಕೂಡಾ ಹಿಂದಿಯ ಮರ್ಡರ್, ಜಿಸ್ಮ್​ 2 ಮಾದರಿಯಲ್ಲೇ ಇರಲಿದೆ. ಮಲ್ಲಿಕಾ ಶೆರಾವತ್, ಬಿಪಾಷಾ ಬಸು, ಸನ್ನಿ ಲಿಯೋನ್ ಸಾಲಿಗೆ ಈ ಚಿತ್ರದ ನಾಯಕಿ ಗುಂಜಾನ್ ಅರಸ್ ಹೆಸರನ್ನು ಸೇರಿಸಬಹುದು ಎನ್ನುತ್ತಾರೆ ನಿರ್ದೇಶಕ ರಾಜೇಶ್ ಮೂರ್ತಿ. ಈ ಚಿತ್ರದಲ್ಲಿ ವಿವಾಹೇತರ ಸಂಬಂಧದ ಕೆಡುಕುಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ‘ಡೆಡ್ಲಿ ಅಫೇರ್’ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ. ಓಂ ಶ್ರೀ ಸಿನಿಮಾಸ್ ಅಡಿಯಲ್ಲಿ ರಾಜೇಶ್ ಮೂರ್ತಿ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ.

ರಾಜೇಶ್ ಮೂರ್ತಿ ನಿರ್ದೇಶನದ 'ಡೆಡ್ಲಿ ಅಫೇರ್'

ಗುಂಜಾನ್ ಅರಸ್ ಮೂಲತ: ಮಧ್ಯಪ್ರದೇಶದ ಇಂಧೋರ್​ನವರು. ಗುಂಜಾನ್ ಹಾಟ್ ಲುಕ್​​ಗೆ ಫೇಮಸ್ ಆಗಿದ್ದಾರೆ. ಮಾಡೆಲ್ ಹಾಗೂ ನಟಿ ಆಗಿರುವ ಗುಂಜಾನ್ ಅರಸ್, 'ಬೀರ್​​​​​ ಬಾಯ್ಸ್ ಮತ್ತು ವೋಡ್ಕಾಗಲ್ರ್ಸ್' ವೆಬ್​​​ಸೀರೀಸ್​​​​​​​​​​ನಲ್ಲಿ ನಟಿಸಿ ನಂತರ ತೆಲುಗು ಚಿತ್ರರಂಗಕ್ಕೆ ಬಂದರು. ನಾಯಕನಾಗಿ ಸ್ವಪನ್ ಕೃಷ್ಣ, ನಾಯಕಿಯಾಗಿ ಗುಂಜಾನ್ ಅರಸ್​​​​​​​​ ನಟಿಸಿದ್ದರೆ ಉಳಿದಂತೆ ಸೋಮಣ್ಣ, ರಾಜೇಶ್​ ಮಿಶ್ರ, ವಿಶ್ರುತ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details