ಕರ್ನಾಟಕ

karnataka

ETV Bharat / sitara

ಏ. 26ಕ್ಕೆ ದಯಾಳ್ 'ರಂಗನಾಯಕಿ' ಕಾದಂಬರಿ ಬಿಡುಗಡೆ: ಅಂದೇ ಚಿತ್ರಕ್ಕೆ ಮುಹೂರ್ತ - Daya padmanabhan

​'ತ್ರಯಂಬಕಂ​' ಸಿನಿಮಾ ನಂತರ ಇದೀಗ ದಯಾಳ್ ಪದ್ಮನಾಭನ್​​​ ​'ರಂಗನಾಯಕಿ​' ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾಗೆ ಏಪ್ರಿಲ್ 26ರಂದು ಮುಹೂರ್ತ ಜರುಗುತ್ತಿದ್ದು, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ದಯಾಳ್ ಪದ್ಮನಾಭನ್​​

By

Published : Apr 24, 2019, 4:25 PM IST

ದಯಾಳ್ ಪದ್ಮನಾಭನ್​ ನಿರ್ದೇಶನದಲ್ಲಿ ಸೆಕೆಂಡ್​ ಇನ್ನಿಂಗ್ಸ್ ಆರಂಭಿಸಿದ್ದು, ಅದರಲ್ಲಿ ಸಕ್ಸಸ್​ ಕೂಡಾ ಆಗಿದ್ದಾರೆ. ಈ ಎರಡು ವರ್ಷಗಳಲ್ಲಿ 'ಬ್ರಿಡ್ಜ್​​​' 'ಹಗ್ಗದ ಕೊನೆ', 'ಆ್ಯಕ್ಟರ್​', 'ಆ ಕರಾಳ ರಾತ್ರಿ', 'ಪುಟ 109', 'ತ್ರಯಂಬಕಂ' ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ.

ಇದೀಗ 'ರಂಗನಾಯಕಿ' ಎಂಬ ಸಿನಿಮಾವನ್ನು ಅವರು ನಿರ್ದೇಶಿಸಲು ಹೊರಟಿದ್ದಾರೆ. ಈ ಸಿನಿಮಾಗೆ ಏಪ್ರಿಲ್ 26ರಂದು ಮುಹೂರ್ತ ಜರುಗಲಿದೆ. ಹಳೆಯ ಸಿನಿಮಾ ಹೆಸರು ಮತ್ತೆ ರಿಪೀಟ್ ಆದರೂ 1981ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಆರತಿ ಅಭಿನಯದ ಆ 'ರಂಗನಾಯಕಿ' ಸಿನಿಮಾಗೂ ಈ 'ರಂಗನಾಯಕಿ'ಗೂ ಯಾವುದೇ ವ್ಯತ್ಯಾಸ ಇಲ್ಲ. ಈ ಸಿನಿಮಾಗೆ ಅದಿತಿ ಪ್ರಭುದೇವ ನಾಯಕಿ.

ಅದಿತಿ ಪ್ರಭುದೇವ

ನನಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ಎಂದು ದಯಾಳ್ ಧೈರ್ಯವಾಗೇ ಹೇಳಿಕೊಳ್ಳುತ್ತಾರೆ. ಈ ಹಿಂದೆ ದಯಾಳ್ ತಮ್ಮ ಡಿ ಪಿಕ್ಚರ್ ಬ್ಯಾನರ್ ವತಿಯಿಂದ ಶಿವಕುಮಾರ್ ವಿರಚಿತ 'ಸುಪಾರಿ ಕೊಲೆ' ಪುಸ್ತಕವನ್ನು ಹೊರತಂದಿದ್ದರು. ಈ ಕಾದಂಬರಿ ಸ್ಫೂರ್ತಿಯಿಂದ 'ಪುಟ 109' ಸಿನಿಮಾ ನಿರ್ದೇಶಿಸಿದ್ದರು. ಇದೀಗ 'ರಂಗನಾಯಕಿ' ಕಥೆಯನ್ನು ಅವರು ಕಿರಣ್ ಹೆಮ್ಮಿಗೆ ಹಾಗೂ ವೆಂಕಟ್​ ದೇವ್ ಅವರ ಕೈಯಲ್ಲಿ ಬರೆಸಿದ್ದು, ಈ ಕಾದಂಬರಿಯನ್ನು ಏಪ್ರಿಲ್ 26ರಂದು ಬಿಡುಗಡೆ ಮಾಡುತ್ತಿದ್ದಾರೆ.

ನಟ ನಿರ್ದೇಶಕ ಎಂ.ಜಿ. ಶ್ರೀನಿವಾಸ್, ಪದ್ಮಾವತಿ ಧಾರಾವಾಹಿ ನಟ ತ್ರಿವಿಕ್ರಮ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಇನ್ನು ಏಪ್ರಿಲ್ 26ರಂದು 'ರಂಗನಾಯಕಿ' ಪುಸ್ತಕ ಬಿಡುಗಡೆ ಮಾಡಲು ಡಿಐಜಿ ರೂಪ ಆಗಮಿಸುತ್ತಿದ್ದಾರೆ.

For All Latest Updates

ABOUT THE AUTHOR

...view details