2018 ರಲ್ಲಿ ಬಿಡುಗಡೆಯಾದ ರಾಜ್ಯಪ್ರಶಸ್ತಿ ವಿಜೇತ ಚಿತ್ರ 'ಆ ಕರಾಳ ರಾತ್ರಿ' ತೆಲುಗಿಗೆ 'ಅನಗನಗಾ ಓ ಅತಿಥಿ' ಹೆಸರಿನಲ್ಲಿ ರೀಮೇಕ್ ಆಗುತ್ತಿರುವುದು ತಿಳಿದ ವಿಚಾರ. ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಮುಗಿಸಿ ನವೆಂಬರ್ 13 ರಂದು ಬಿಡುಗಡೆಗೆ ಕೂಡಾ ಸಿದ್ಧವಾಗಿದೆ.
ಚೈತನ್ಯ ಕೃಷ್ಣ, ದಯಾಳ್ ಪದ್ಮನಾಭನ್, ಪಾಯಲ್ ರಜಪೂತ್ ನವೆಂಬರ್ ತಿಂಗಳಿನಲ್ಲಿ 7 ಹೊಸ ತೆಲುಗು ಸಿನಿಮಾಗಳು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ. ಅದರಲ್ಲಿ ದಯಾಳ್ ಪದ್ಮನಾಭನ್ ನಿರ್ದೇಶನದ 'ಅನಗನಗಾ ಓ ಅತಿಥಿ' ನವೆಂಬರ್ 13 ರಂದು ಅಲ್ಲು ಅರವಿಂದ್ ಅವರ ಆಹಾ ಒಟಿಟಿ ವೇದಿಕೆಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ತೆಲುಗು ಚಿತ್ರದಲ್ಲಿ ನವೀನ್ ಕೃಷ್ಣ ಸಹನಿರ್ದೇಶಕರಾಗಿ ಕೆಲಸ ಮಾಡಿರುವುದಲ್ಲದೆ, ಕನ್ನಡದಲ್ಲಿ ಮಾಡಿದ್ದ ಪಾತ್ರವನ್ನು ಮಾಡಿದ್ದಾರೆ.
ಈ ಚಿತ್ರದ ಜೊತೆ ನವೆಂಬರ್ 4 ರಂದು ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅಭಿನಯದ 'ಮಿಸ್ ಇಂಡಿಯಾ' ನೆಟ್ಫ್ಲಿಕ್ಸ್ನಲ್ಲಿ, ನವೆಂಬರ್ 6 ರಂದು ಅಮೆಜಾನ್ ಪ್ರೈಂನಲ್ಲಿ 'ಗತಮ್', 12 ರಂದು ಸೂರ್ಯ ಅಭಿನಯದ 'ಆಕಾಸಮ್ ನೀ ಹದ್ದುರಾ', ನವೆಂಬರ್ 13 ರಂದು ಆಹಾದಲ್ಲಿ 'ಮಾವಿಂತ ಗಾಧ ವಿನುಮ', 14 ರಂದು ನಯನ ತಾರಾ ಅಭಿನಯದ 'ಅಮ್ಮೋರು ತಲ್ಲಿ' ಡಿಸ್ನಿ ಹಾಟ್ಸ್ಟಾರ್ನಲ್ಲಿ, ನವೆಂಬರ್ 20 ರಂದು ಆನಂದ್ ದೇವರಕೊಂಡ ಅಭಿನಯದ 'ಮಿಡಲ್ ಕ್ಲಾಸ್ ಮೆಲೋಡೀಸ್' ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುತ್ತಿದೆ.
'ಅನಗನಗಾ ಓ ಅತಿಥಿ' ಚಿತ್ರದಲ್ಲಿ ನವೀನ್ ಕೃಷ್ಣ 14 ದಿನಗಳ ಅಂತರದಲ್ಲಿಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗುತ್ತಿರುವ 7 ತೆಲುಗು ಸಿನಿಮಾಗಳಿಗೆ ಸುಮಾರು 250 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿದೆ. ಈ ರೀತಿ ಹೊಸ ಸಿನಿಮಾಗಳು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದ್ದರೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಹೇಗೆ ಕರೆತರುವುದು ಎಂದು ಪ್ರದರ್ಶಕ ವಲಯ ಚಿಂತಿಸುತ್ತಿದೆ.