ಕರ್ನಾಟಕ

karnataka

ETV Bharat / sitara

ದಯಾಳ್ ಪದ್ಮನಾಭನ್  ‘ಆ ಕರಾಳ ರಾತ್ರಿ’ ಚಿತ್ರ ಈಗ ಪುಸ್ತಕ ರೂಪದಲ್ಲಿ ಬಿಡುಗಡೆ - Dayal Padmanabhan A KARALA RATHRI movie

ಆ ಕರಾಳ ರಾತ್ರಿ ಪುಸ್ತಕ ದಯಾಳ್ ಪದ್ಮನಾಭನ್ ಬರೆದಿದ್ದು, ಇಂದು ಎಲ್ಲರಿಗೂ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆ ಕರಾಳ ರಾತ್ರಿ ಪುಸ್ತಕ ಬಿಡುಗಡೆಯನ್ನ ಸಹ ವಿಭಿನ್ನವಾಗಿ ಹಮ್ಮಿಕೊಂಡಿದ್ದಾರೆ ದಯಾಳ್.

ಆ ಕರಾಳ ರಾತ್ರಿ
ಆ ಕರಾಳ ರಾತ್ರಿ

By

Published : Jul 13, 2020, 11:39 AM IST

ಒಂದು ಯಶಸ್ವಿ ಸಿನಿಮಾವನ್ನು ಹೇಗೆ ಎತ್ತಿ ಹಿಡಿಯಬೇಕು ಎಂದು ದಯಾಳ್ ಪದ್ಮನಾಭನ್ ತೋರಿಸಿಕೊಟ್ಟಿದ್ದಾರೆ. ಮೂಲತಃ ನಾಟಕ ಆದ ‘ಆ ಕರಾಳ ರಾತ್ರಿ’ ಸಿನಿಮಾಕ್ಕೆ ಅಳವಡಿಕೆ ಮಾಡಿ ಚಿತ್ರವನ್ನೂ ಯಶಸ್ವಿ ಸಹ ಮಾಡಿದವರು ದಯಾಳ್ ಪದ್ಮನಾಭನ್. ಅದು ಎರಡು ವರ್ಷಗಳ ಪಯಣ. ಚಿತ್ರ ಬಿಡುಗಡೆ ಆಗಿ ಎರಡು ವರ್ಷ ಪೂರೈಸುತ್ತಿರುವ ಈ ದಿನದಂದೇ ಅವರು ‘ಆ ಕರಾಳ ರಾತ್ರಿ’ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಆ ಕರಾಳ ರಾತ್ರಿ ಪುಸ್ತಕ ದಯಾಳ್ ಪದ್ಮನಾಭನ್ ಬರೆದಿದ್ದು, ಇಂದು ಎಲ್ಲರಿಗೂ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆ ಕರಾಳ ರಾತ್ರಿ ಪುಸ್ತಕ ಬಿಡುಗಡೆಯನ್ನೂ ಸಹ ವಿಭಿನ್ನವಾಗಿ ಹಮ್ಮಿಕೊಂಡಿದ್ದಾರೆ ದಯಾಳ್. ಇಂದು ಅವರು ಫೇಸ್ ಬುಕ್ ಹಾಗೂ ಇನ್​ಸ್ಟಾ ಗ್ರಾಂ ನಲ್ಲಿ 6 ಗಂಟೆಗೆ ಚಿತ್ರಕಥೆ ಬರೆದ ನವೀನ್ ಕೃಷ್ಣ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿಯೇ ಪುಸ್ತಕವನ್ನು ಸಹ ಬಿಡುಗಡೆ ಮಾಡಲಿದ್ದಾರೆ.

ಲಾಕ್​​​ಡೌನ್ ಸಮಯದಲ್ಲಿ ‘ಆ ಕರಾಳ ರಾತ್ರಿ’ ಪುಸ್ತಕ ಬಿಡುಗಡೆಗೆ ಸಾಮಾಜಿಕ ಜಾಲತಾಣವೇ ಬೆಸ್ಟ್ ಎಂದು ಆಯ್ಕೆ ಮಾಡಿಕೊಂಡಿದ್ದಾರೆ ದಯಾಳ್ ಪದ್ಮನಾಭನ್.

For All Latest Updates

ABOUT THE AUTHOR

...view details