ವಾಷಿಂಗ್ಟನ್: ಅಮೆರಿಕ ನಟ ಡೇವಿಡ್ ಸ್ಚಿಮ್ಮರ್ ಟೆಲಿವಿಷನ್ ಕಾರ್ಯಕ್ರಮ 'ಫ್ರೆಂಡ್ಸ್' ಬಗ್ಗೆ ಹೊಸ ವಿಚಾರವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಮುಂದಿನ ಸರಣಿ ಚಿತ್ರೀಕರಣವಾಗುವುದು ಯಾವಾಗ ಎಂಬ ವಿಚಾರವನ್ನು ಕೂಡಾ ತಿಳಿಸಿದ್ದಾರೆ.
2004 ರಲ್ಲಿ ಕೊನೆಯ ಬಾರಿಗೆ ಪ್ರಸಾರವಾಗಿದ್ದ 'ಫ್ರೆಂಡ್ಸ್' ಹೊಸ ಸೀಸನ್ಗೆ ಸಿದ್ಧತೆ - American Television series
1994 ರಿಂದ 2004 ವರೆಗೆ ಪ್ರಸಾರವಾದ ಅಮೆರಿಕನ್ ಟೆಲಿವಿಷನ್ ಸೀರೀಸ್ 'ಫ್ರೆಂಡ್ಸ್' ಹೊಸ ಸೀಸನ್ ಚಿತ್ರೀಕರಣ ಮತ್ತೆ ಆರಂಭವಾಗಲಿದೆ. ಅಮೆರಿಕ ನಟ ಡೇವಿಡ್ ಸ್ಚಿಮ್ಮರ್ ಈ ಸೀರೀಸ್ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಮದುವೆಯಾಗಿ 6 ವರ್ಷಗಳ ನಂತರ ಸಿಹಿ ಸುದ್ದಿ ಹಂಚಿಕೊಂಡ ಶ್ರೇಯಾ ಘೋಷಾಲ್
ಡೇವಿಡ್ ಕ್ರೇನ್ ಹಾಗೂ ಮಾರ್ತಾ ಕುಫ್ಮೆನ್ ನಿರ್ದೇಶಿಸಿರುವ ಈ ಸರಣಿ ಅಮೆರಿಕ ಎನ್ಬಿಸಿ ವಾಹಿನಿಯಲ್ಲಿ 1994 ಸೆಪ್ಟೆಂಬರ್ 22 ರಿಂದ 2004 ಮೇ 6 ವರೆಗೂ 10 ಎಪಿಸೋಡ್ಗಳಲ್ಲಿ ಪ್ರಸಾರವಾಗಿತ್ತು. ಡೇವಿಡ್ ಸ್ಚಿಮ್ಮರ್,ಜೆನ್ನಿಫರ್ ಅನಿಸ್ಟನ್, ಕರ್ಟೆನ್ಸಿ ಕಾಕ್ಸ್, ಲಿಸಾ ಕುಡ್ರೊ, ಮ್ಯಾಟ್ ಲಿ, ಮ್ಯಾಥ್ಯೂ ಪೆರ್ರಿ ಹಾಗೂ ಇನ್ನಿತರರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆರು ಮಂದಿ ಸ್ನೇಹಿತರ ನಡುವೆ ಸುತ್ತುವ ಕಥೆಯೇ 'ಫ್ರೆಂಡ್ಸ್'. "ಈಗಾಗಲೇ ನಾವು 10 ಎಪಿಸೋಡ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಕಳೆದ ವರ್ಷ ಜನವರಿಯಲ್ಲಿ ಚಿತ್ರೀಕರಣ ಆರಂಭಿಸಿ ಹೆಚ್ಬಿಒ ಮ್ಯಾಕ್ಸ್ನಲ್ಲಿ ಮೇ ವೇಳೆಗೆ ಪ್ರಸಾರ ಮಾಡುವುದಾಗಿ ಶೆಡ್ಯೂಲ್ ಮಾಡಲಾಗಿತ್ತು ಆದರೆ ಕೊರೊನಾ ಕಾರಣದಿಂದ ಪ್ಲ್ಯಾನ್ ಬದಲಾಯ್ತು. ಇದೀಗ ಅಗತ್ಯ ಮುಂಜಾಗ್ರತೆಗಳೊಂದಿಗೆ ಶೀಘ್ರದಲ್ಲೇ ಮತ್ತೆ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ತಂಡ ಮಾಹಿತಿ ನೀಡಿದೆ.