ಹರಿಪ್ರಿಯಾ ಹಾಗೂ ಸುಮಲತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'D/0 ಪಾರ್ವತಮ್ಮ' ಚಿತ್ರ ಇದೇ ಶುಕ್ರವಾರ ಅಂದರೆ ಮೇ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ ಇದು ಹರಿಪ್ರಿಯಾ ಅಭಿನಯದ 25ನೇ ಚಿತ್ರ.
'D/0 ಪಾರ್ವತಮ್ಮ'ಚಿತ್ರತಂಡದಿಂದ ತಾಯಿ-ಮಗಳ ಸೆಲ್ಫಿ ಸ್ಪರ್ಧೆಗೆ ಆಹ್ವಾನ - undefined
ಮೇ 24 ರಂದು 'D/0 ಪಾರ್ವತಮ್ಮ' ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು ಚಿತ್ರತಂಡ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದೆ. ಇದಕ್ಕಾಗಿ ತಾಯಿ-ಮಗಳ ಸೆಲ್ಫಿ ಸ್ಪರ್ಧೆಯನ್ನು ಕೂಡಾ ಏರ್ಪಡಿಸಿದೆ.
'D/0 ಪಾರ್ವತಮ್ಮ' ಚಿತ್ರತಂಡ ಸದ್ಯಕ್ಕೆ ಅಬ್ಬರದ ಪ್ರಚಾರದಲ್ಲಿ ಬ್ಯುಸಿ ಇದೆ. ಥಿಯೇಟರ್ಗಳಿಗೆ ಜನರನ್ನು ಸೆಳೆಯಲು ಚಿತ್ರತಂಡ ಡಿಫರೆಂಟ್ ಆಗಿ ಪ್ರಮೋಷನ್ ಕೂಡಾ ಮಾಡುತ್ತಿದೆ. ಚಿತ್ರತಂಡ ತಾಯಿ-ಮಗಳ ಸೆಲ್ಫಿ ಸ್ಪರ್ಧೆಯನ್ನು ಏರ್ಪಡಿಸಿದೆ. 'ಹೆಣ್ಣು ಮಕ್ಕಳು ತಮ್ಮ ಅಮ್ಮನೊಂದಿಗೆ ಸೆಲ್ಫಿ ತೆಗೆದು 7411157888 ವಾಟ್ಸಾಪ್ ನಂಬರಿಗೆ ಫೋಟೋ ಕಳಿಸುವ ಮೂಲಕ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು ಎಂದು ಚಿತ್ರತಂಡ ತಿಳಿಸಿದೆ. ನಟಿ ಹರಿಪ್ರಿಯಾ ಕೂಡಾ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬೇಗ ಬೇಗ ಎಲ್ಲರೂ ನಿಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದು ಕಳಿಸಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
D/0 ಪಾರ್ವತಮ್ಮ ತಾಯಿ-ಮಗಳ ಬಾಂಧವ್ಯದ ಜೊತೆಗೆ ಕ್ರೈಂ ಸುತ್ತ ನಡೆಯುವ ಥ್ರಿಲ್ಲರ್ ಎಳೆ ಹೊಂದಿರುವ ಚಿತ್ರವಾಗಿದೆ. ವೈದೇಹಿ ಹೆಸರಿನ ತನಿಖಾಧಿಕಾರಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಶಂಕರ್.ಜೆ ಚೊಚ್ಚಲ ನಿರ್ದೇಶನದಲ್ಲಿ, ಹರಿಪ್ರಿಯಾ ಹಾಗೂ ಸುಮಲತಾ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸುಮಲತಾ ಅಂಬರೀಶ್ ಹರಿಪ್ರಿಯಾ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.