ಕರ್ನಾಟಕ

karnataka

By

Published : May 14, 2019, 1:03 PM IST

ETV Bharat / sitara

'ಐ ಲವ್​ ಯು' ಬಿಡುಗಡೆಗೆ ದಿನಾಂಕ ಫಿಕ್ಸ್​​: ತೆರೆ ಮೇಲೆ ಮತ್ತೆ ಉಪ್ಪಿ ಪ್ರೀತಿ-ಪ್ರೇಮದ ಪಾಠ

ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಐ ಲವ್​ ಯು' ಸಿನಿಮಾ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇದೀಗ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್​​​​​​​ಗಾಗಿ ಬೇಡಿಕೆ ಕೂಡಾ ಹೆಚ್ಚಾಗಿದೆಯಂತೆ.

ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯದಲ್ಲಿ ಸಕ್ರಿಯರಾದಾಗಿನಿಂದ ಸಿನಿಮಾ ಕಡೆ ಹೆಚ್ಚು ಗಮನ ಹರಿಸಿರಲಿಲ್ಲ. ಆದರೆ ಒಂದೂವರೆ ವರ್ಷದ ನಂತರ ಇದೀಗ ಅವರ 'ಐ ಲವ್​ ಯು' ಸಿನಿಮಾ ಬಿಡುಗಡೆಯಾಗುತ್ತಿದೆ.

ಆರ್​. ಚಂದ್ರು ನಿರ್ದೇಶನದ ಈ ಸಿನಿಮಾ ಜೂನ್ 14 ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಬಿಡುಗಡೆಗೆ ಇನ್ನೂ ಒಂದು ತಿಂಗಳಿರುವಾಗಲೇ ಮುಂಗಡ ಟಿಕೆಟ್​​ಗಾಗಿ ಅಭಿಮಾನಿಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ನಿರ್ದೇಶಕ ಚಂದ್ರು ಹೇಳಿದ್ದಾರೆ. ಉಪ್ಪಿಯ ವಿಭಿನ್ನ ಲುಕ್, ಮಾಸ್ ಪಂಚಿಂಗ್ ಡೈಲಾಗ್ ಕೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಉಪೇಂದ್ರ, ರಚಿತಾ

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮೇಲೆ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್​​ ಆರಂಭವಾಗಲಿದೆ ಎಂದು ಚಂದ್ರು ಹೇಳಿದ್ದಾರೆ. ಸಿನಿಮಾ ತೆಲುಗಿನಲ್ಲಿ ಕೂಡಾ ತಯಾರಾಗಿದ್ದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಮೂರೂ ರಾಜ್ಯಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ ಎನ್ನಲಾಗ್ತಿದೆ. ಚಿತ್ರ ಲವ್​, ಸೆಂಟಿಮೆಂಟ್ ಕಥೆಯನ್ನು ಹೊಂದಿದ್ದು ಪ್ರೀತಿ-ಪ್ರೇಮದ ಪಾಠವನ್ನು ಉಪ್ಪಿ ಬೋಧಿಸಲಿದ್ದಾರೆ.

ಸೋನುಗೌಡ, ಉಪೇಂದ್ರ

ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಹಾಗೂ ಸೋನುಗೌಡ ಕಾಣಿಸಿಕೊಂಡಿದ್ದು, ಡಾ. ಕಿರಣ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಿರ್ದೇಶಕ ಆರ್​​​. ಚಂದ್ರು ಅವರೇ ಚಿತ್ರವನ್ನು ನಿರ್ಮಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details