ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹಲವು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪೋಸ್ಟರ್ ಹಾಗೂ ಫಸ್ಟ್ಲುಕ್ ಟೀಸರ್ನಿಂದಲೇ ಸದ್ದು ಮಾಡುತ್ತಿರುವ 'ದಮಯಂತಿ' ಸಿನಿಮಾ ಶೂಟಿಂಗ್ ಮುಗಿಸಿ ಡಬ್ಬಿಂಗ್ ಹಂತದಲ್ಲಿದೆ.
'ದಮಯಂತಿ' ಆಗಮನಕ್ಕೆ ಡೇಟ್ ಫಿಕ್ಸ್: ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ - undefined
ರಾಧಿಕಾ ಕುಮಾರಸ್ವಾಮಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರುವ 'ದಮಯಂತಿ' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾವನ್ನು ಅಕ್ಟೋಬರ್ನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ನವರಸನ್ ಹೇಳಿದ್ದಾರೆ.
!['ದಮಯಂತಿ' ಆಗಮನಕ್ಕೆ ಡೇಟ್ ಫಿಕ್ಸ್: ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ](https://etvbharatimages.akamaized.net/etvbharat/prod-images/768-512-3780343-thumbnail-3x2-damayanti.jpg)
ಚಿತ್ರತಂಡ ಸಿನಿಮಾ ಬಿಡುಗಡೆಗೆ ಡೇಟ್ ಕೂಡಾ ಫಿಕ್ಸ್ ಮಾಡಿದೆ. ಗ್ರಾಫಿಕ್ಸ್ ಕೆಲಸ ಹೆಚ್ಚಾಗಿರುವ ಕಾರಣ ಸಿನಿಮಾ ಬಿಡುಗಡೆ ಸ್ವಲ್ಪ ತಡವಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು 5 ಭಾಷೆಗಳಲ್ಲೂ ಟೀಸರನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿ ನಡೆದಿದೆ. ಆಯಾ ಭಾಷೆಯ ಸೆಲಬ್ರಿಟಿಗಳ ಕೈಯಲ್ಲಿ ಟೀಸರ್ ಬಿಡುಗಡೆ ಮಾಡಿಸುತ್ತಿರುವುದು ಮತ್ತೊಂದು ವಿಶೇಷ.
ಇದೊಂದು ಥ್ರಿಲ್ಲರ್ ಎಳೆಯ ಭಯಾನಕ ಕತೆ ಹೊಂದಿರುವ ಸಿನಿಮಾವಾಗಿದ್ದು ಚಿತ್ರದಲ್ಲಿ ರಾಧಿಕಾ ಹೊಸ ಅವತಾರ ತಾಳಿದ್ದಾರೆ. ಚಿತ್ರವನ್ನು ನವರಸನ್ ನಿರ್ಮಾಣ ಮಾಡಿರುವುದಲ್ಲದೆ ನಿರ್ದೇಶನ ಕೂಡಾ ಮಾಡಿದ್ದಾರೆ. ಅನುಷಾ ರೈ, ತಬಲಾ ನಾಣಿ, ಸಾಧು ಕೋಕಿಲ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.