ಲಾಕ್ಡೌನ್ ಅನ್ಲಾಕ್ ನಂತರ ನಿಧಾನವಾಗಿ ಚಿತ್ರರಂಗ ಸಹಜ ಸ್ಥಿತಿಗೆ ಮರಳುತ್ತಿದೆ. ಈಗಾಗಲೇ ಸ್ಟಾರ್ ನಟರ ಸಿನಿಮಾಗಳು, ಚಿತ್ರೀಕರಣಗಳೆಲ್ಲಾ ಭರದಿಂದ ಸಾಗಿವೆ. ಆದರೆ, ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ. ಈಗಾಗಲೇ ಸರ್ಕಾರ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ್ದು, ಸಿನಿಮಾ ರಿಲೀಸ್ ಮಾಡೋದಕ್ಕೆ ಕ್ಯೂನಲ್ಲಿವೆ.
ಇದೀಗ ಟೀಸರ್ ಮತ್ತು ಹಾಡುಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿರೋ ಚಿತ್ರ 'ನಿನ್ನ ಸನಿಹಕೆ. ಈ ಸಿನಿಮಾ ಬಿಡುಗಡೆ ಆಗೋದಿಕ್ಕೆ ರೆಡಿಯಾಗಿದೆ. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಖ್ಯಾತಿಯ ಸೂರಜ್ ಗೌಡ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡ್ತಿರೋ ಈ ಸಿನಿಮಾ, ಗಾಂಧಿನಗರದ ಅಂಗಳದಲ್ಲಿ ಹೊಸ ಭರವಸೆ ಹುಟ್ಟಿಸಿದೆ.