ಕರ್ನಾಟಕ

karnataka

By

Published : Oct 2, 2019, 7:26 PM IST

ETV Bharat / sitara

ಅಪ್ಪಟ ಕನ್ನಡ ಶೀರ್ಷಿಕೆ ಹೊಂದಿರುವ 'ಗಂಟುಮೂಟೆ' ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿ

ಅಪ್ಪಟ ಕನ್ನಡ ಶೀರ್ಷಿಕೆ ಹೊಂದಿರುವ 'ಗಂಟುಮೂಟೆ' ಸಿನಿಮಾ ಇದೇ ತಿಂಗಳ 18 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದೆ.

ಗಂಟುಮೂಟೆ

ಸ್ಯಾಂಡಲ್​​​ವುಡ್​​​ನಲ್ಲಿ ಹೊಸ ಹೊಸ ಕಾನ್ಸೆಪ್ಟ್​​​​ ಸಿನಿಮಾಗಳು ತಯಾರಾಗುತ್ತಿವೆ. ಈ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಪೋಸ್ಟರ್​, ಟ್ರೇಲರ್​​​​​​​​​​ನಿಂದ ಗಮನ ಸೆಳೆಯುತ್ತಿವೆ. ಇದೀಗ ಅಪ್ಪಟ ಕನ್ನಡ ಶೀರ್ಷಿಕೆ ಇಟ್ಟುಕೊಂಡು ಬರುತ್ತಿರುವ ಸಿನಿಮಾ 'ಗಂಟುಮೂಟೆ' ಕೂಡಾ ಹೆಸರಿನಿಂದಲೇ ಗಮನ ಸೆಳೆಯುತ್ತಿದೆ.

'ಗಂಟುಮೂಟೆ' ಚಿತ್ರದ ಸುದ್ದಿಗೋಷ್ಠಿ

ಸಿನಿಮಾ ಸದ್ದಿಲ್ಲದೆ ತಯಾರಾಗಿದ್ದು ಬಿಡುಗಡೆ ದಿನಾಂಕ ಕೂಡಾ ಅನೌನ್ಸ್ ಆಗಿದೆ. ಈ ಬಗ್ಗೆ ಮಾತನಾಡಲು ಚಿತ್ರದ ನಿರ್ದೇಶಕಿ ರೂಪಾರಾವ್, ಯುವ ನಟ ನಿಶ್ಚಿತ್ ಕೊರೋಡಿ, ತೇಜು ಬೆಳವಾಡಿ, ಸಂಗೀತ ನಿರ್ದೇಶಕ ಅಪರಾಜಿತ್ ಸ್ರಿಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಿರುಚಿತ್ರಗಳನ್ನು ಮಾಡುತ್ತಿದ್ದ ರೂಪಾರಾವ್ ಮೊದಲ ಬಾರಿ ಸಿನಿಮಾ ನಿರ್ದೇಶನದ ಜೊತೆಗೆ ಸ್ನೇಹಿತರ ಜೊತೆ ನಿರ್ಮಾಣ ಕೂಡಾ ಮಾಡಿದ್ದಾರೆ. ರಿಲೀಸ್​​​​​​​​​ಗೂ ಮುಂಚೆ ವಿದೇಶಗಳಲ್ಲಿ ಪ್ರದರ್ಶನಗೊಂಡಿರುವ 'ಗಂಟುಮೂಟೆ' ಸಿನಿಮಾ ಇದೇ ಅಕ್ಟೋಬರ್ 18 ಕ್ಕೆ ತೆರೆ ಕಾಣುತ್ತಿದೆ. 90ರ ದಶಕದಲ್ಲಿ 16 ವರ್ಷದ ಹುಡುಗಿಯೊಬ್ಬಳ ವಯಸ್ಸಿನ ಕಥೆಯನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾ ನ್ಯೂಯಾರ್ಕ್-ಇಂಡಿಯನ್ ಚಲನಚಿತ್ರೋತ್ಸವದಲ್ಲಿ, ಬೆಸ್ಟ್ ಸ್ಕ್ರೀನ್ ಪ್ಲೇ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಗಂಟುಮೂಟೆ ಚಿತ್ರತಂಡ

ಕೆನಡಾ, ಆಸ್ಟ್ರೇಲಿಯಾ, ಯುಎಸ್​​​​ಎ, ಇಟಲಿ ಸೇರಿದಂತೆ ಹಲವಾರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ 'ಗಂಟುಮೂಟೆ' ಸಿನಿಮಾವನ್ನು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಿರ್ದೇಶಕಿ ರೂಪಾರಾವ್ ಹೇಳಿದ್ದಾರೆ. ಬೆಳವಾಡಿ ಕುಟುಂಬದ ಕುಡಿ, ತೇಜು ಬೆಳವಾಡಿ ಈ ಚಿತ್ರದಲ್ಲಿ ಹದಿಹರೆಯದ ಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಿದ್ದ ಹುಡುಗ ಹೇಗೆ ಪ್ರೀತಿಯಲ್ಲಿ ಬೀಳುತ್ತಾನೆ ಎಂಬ ಪಾತ್ರದಲ್ಲಿ ನಿಶ್ಚಿತ್ ಕೊರೋಡಿ ನಟಿಸಿದ್ದಾರೆ. ಇನ್ನು ಬೆಂಗಳೂರನ್ನು 90 ರ ಹಿನ್ನೆಲೆಯಲ್ಲಿ ತೋರಿಸುವುದು ಕ್ಯಾಮರಾಮ್ಯಾನ್​​ ಸಹದೇವ್ ಕೇಳ್ವಾಡಿಗೆ ಚಾಲೆಂಜಿಂಗ್ ಆಗಿತ್ತಂತೆ.

ABOUT THE AUTHOR

...view details