ದರ್ಶನ್ ಹಾಗೂ ಸೃಜನ್ ಲೋಕೇಶ್ ಫ್ರೆಂಡ್ಶಿಪ್ ಬಾಂಡ್ ತುಂಬಾ ಹಳೆಯದು. ಈ ಇಬ್ಬರು ನಟರು ಕನ್ನಡದ ಹಳೆ ಸಿನಿಮಾದಲ್ಲಿ ವಿಲನ್ಗಳಾಗಿದ್ದ ಲೋಕೇಶ್ ಮತ್ತು ತೂಗುದೀಪ ಶ್ರೀನಿವಾಸರ ಮಕ್ಕಳು. ಇನ್ನು ದರ್ಶನ್ ಹಾಗೂ ಸೃಜನ್ ನವಗ್ರಹ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಸೃಜನ್ ಸಿನಿಮಾ ನೋಡಿ ಆಶೀರ್ವದಿಸಿ ಎಂದ ದರ್ಶನ್ - ಸೃಜನ್ ಲೋಕೇಶ್ಗೆ ದರ್ಶನ್ ಶುಭಾಷಯ
ನಾಳೆ ಸೃಜನ್ ಲೋಕೇಶ್ ಮತ್ತು ಹರಿಪ್ರಿಯ ನಟನೆಯ "ಎಲ್ಲಿದ್ದೆ ಇಲ್ಲಿ ತನಕ" ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ.
ಹೌದು, ನಾಳೆ ಸೃಜನ್ ಲೋಕೇಶ್ ಮತ್ತು ಹರಿಪ್ರಿಯ ನಟನೆಯ "ಎಲ್ಲಿದ್ದೆ ಇಲ್ಲಿ ತನಕ" ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ದಚ್ಚು, ನಮ್ಮ ಲೋಕೇಶ್ ಪ್ರೊಡಕ್ಷನ್ನಿಂದ ಮೂಡಿಬಂದಿರುವ ‘ಎಲ್ಲಿದ್ದೇ ಇಲ್ಲಿ ತನಕ’ ನಾಳೆ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾರೆ.
ಈ ಸಿನಿಮಾವನ್ನು ತೇಜಸ್ವಿ ನಿರ್ದೇಶನ ಮಾಡ್ತಿದ್ದು, ಸ್ವತಃ ಸೃಜನ್ ಲೋಕೇಶ್ ಬಂಡವಾಳ ಹೂಡಿದ್ದಾರೆ. ಇನ್ನು ಈ ಸಿನಿಮಾದ ರೊಮ್ಯಾಂಟಿಕ್ ಹಾಡುಗಳು ಕೇಳುಗರಿಗೆ ಆನಂದ ಮೂಡಿಸಿದ್ದು, ಸಿನಿಮಾ ಬಗ್ಗೆ ಕುತೂಹಲವನ್ನೂ ಹೆಚ್ಚಿಸಿವೆ.