ರೈತ ದಿನಾಚರಣೆ ಹಿನ್ನೆಲೆಯಲ್ಲಿ ಶುಭ ಕೋರಿರುವ ನಟ ದರ್ಶನ್, ತಮ್ಮ ಫೇಸ್‍ಬುಕ್ ಪೇಜ್‌ನಲ್ಲಿ ರೈತರ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ರೈತರು ಹೃದಯ, ಆತ್ಮವನ್ನು ಮಣ್ಣಿನಲ್ಲಿರಿಸಿ ನಮಗೆ ಆಹಾರ ಕೊಡ್ತಾರೆ: ನಟ ದರ್ಶನ್ - Challenging Star Darshan
ರೈತರು ನಿಜವಾದ ವೀರರು. ಅವರು ತಮ್ಮ ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರ ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿದ್ದಾರೆ. ರೈತರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿರಿಸಿ ನಮಗೆ ಆಹಾರ ಕೊಡುತ್ತಾರೆ. ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ- ನಟ ದರ್ಶನ್ ಟ್ವೀಟ್
ರೈತ ದಿನಾಚರಣೆಗೆ ಶುಭ ಕೋರಿದ ದರ್ಶನ್
ರೈತರು ನಿಜವಾದ ವೀರರಾಗಿದ್ದಾರೆ. ಅವರು ತಮ್ಮ ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರ ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿದ್ದಾರೆ. ರೈತರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿರಿಸಿ ನಮಗೆ ಆಹಾರ ಕೊಡುತ್ತಾರೆ. ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ ಎಂದಿದ್ದಾರೆ.
ಭಾರತದ 5ನೇ ಪ್ರಧಾನ ಮಂತ್ರಿಯಾಗಿದ್ದ ಹಾಗೂ ರೈತ ನಾಯಕರಾಗಿದ್ದ ಚೌಧರಿ ಚರಣ್ ಸಿಂಗ್ ಜನ್ಮದಿನವಾದ ಡಿಸೆಂಬರ್ 23ನ್ನು ಪ್ರತಿವರ್ಷ 'ರಾಷ್ಟ್ರೀಯ ರೈತ ದಿನ'ವನ್ನಾಗಿ ಆಚರಿಸಲಾಗುತ್ತಿದೆ.