ಮ್ಯೂಸಿಕ್ ಮಾಂತ್ರಿಕ ವಿ ಹರಿಕೃಷ್ಣ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗೀತಾಭಿಮಾನಿಗಳು ಹರಿಕೃಷ್ಣ ಗೆ ಬರ್ತ್ ಡೇ ವಿಶ್ ಮಾಡ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹರಿಕೃಷ್ಣಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಹರಿಕೃಷ್ಣ ಬರ್ತ್ ಡೇಗೆ ವಿಶ್ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ - harikrishna news
ಹರಿಕೃಷ್ಣ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿಯೇ ವಿಶ್ ಮಾಡಿರುವ ಡಿ ಬಾಸ್, ತನ್ನ ವೈವಿಧ್ಯಮಯ ಟ್ಯೂನ್ಗಳಿಂದ ಸಿನಿ ರಸಿಕರ ಮನಗೆದ್ದಿರುವ ಮ್ಯೂಸಿಕ್ ಮಾಂತ್ರಿಕ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಇನ್ನು ಹೆಚ್ಚು ಕಲಾಸೇವೆ ಹರಿಯಿಂದಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಹರಿಕೃಷ್ಣ ಬರ್ತ್ ಡೇಗೆ ವಿಶ್ ಮಾಡಿದ್ರು ಚಾಲೆಂಜಿಂಗ್ ಸ್ಟಾರ್
ಎಂದಿನಂತೆ ಕನ್ನಡದಲ್ಲಿಯೇ ವಿಶ್ ಮಾಡಿರುವ ಡಿ ಬಾಸ್, ತನ್ನ ವೈವಿಧ್ಯಮಯ ಟ್ಯೂನ್ಗಳಿಂದ ಸಿನಿರಸಿಕರ ಮನಗೆದ್ದಿರುವ ಮ್ಯೂಸಿಕ್ ಮಾಂತ್ರಿಕ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಇನ್ನು ಹೆಚ್ಚು ಕಲಾಸೇವೆ ಹರಿಯಿಂದಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಹರಿಕೃಷ್ಣ ಕೇವಲ ಸಂಗೀತ ಸಂಯೋಜಕ ಮಾತ್ರವಲ್ಲದೇ ಗಾಯಕ ಹಾಗೂ ಸಿನಿಮಾ ನಿರ್ದೇಶಕ ಕೂಡ ಹೌದು. ದರ್ಶನ್ ಮತ್ತು ಹರಿ ನಡುವೆ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಎಂಬಂತೆ ದಚ್ಚು ಅಭಿನಯದ ಹತ್ತಾರು ಚಿತ್ರಗಳಿಗೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಲ್ಲದೆ ದರ್ಶನ್ ಅಭಿನಯದ ಯಜಮಾನ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.