ಕರ್ನಾಟಕ

karnataka

ETV Bharat / sitara

ಲಾಕ್​ಡೌನ್​ನಲ್ಲಿ ಪಶು ಸಾಕಾಣಿಕೆ ಮಾಡುತ್ತಿದ್ದೇನೆ: ದರ್ಶನ್ - ನಟ ದರ್ಶನ್ ತೂಗುದೀಪ

ಲಾಕ್​ಡೌನ್​ನಿಂದ ನನಗೂ ಕೆಲಸ‌ ಇಲ್ಲ. ಕುರಿ, ಕೋಳಿ ಸಾಕಾಣಿಕೆ ಮಾಡ್ತಿದ್ದೇನೆ. ನಿಮ್ಮ‌ ಮನೆಯಲ್ಲಿ ಕುದುರೆ ಇದ್ದರೆ ಹೇಳಿ ಅಲ್ಲಿಗೂ ಬರುತ್ತೇನೆ ಎಂದು ನಟ ದರ್ಶನ್ ತಿಳಿಸಿದರು.

darshan
darshan

By

Published : Aug 31, 2020, 4:57 PM IST

ದಾವಣಗೆರೆ: ಕುದುರೆ ತೆಗೆದುಕೊಂಡು ಹೋಗಲು ದಾವಣಗೆರೆಗೆ ಬಂದಿದ್ದೇನೆ. ಮಲ್ಲಣ್ಣ ಒಳ್ಳೆಯ ಕುದುರೆಗಳನ್ನು ಸಾಕಿದ್ದಾರೆ. ಪ್ರೀತಿಯಿಂದ 2 ಕುದುರೆಗಳನ್ನು ನೀಡುತ್ತಿದ್ದಾರೆ. ಖರೀದಿ ಮಾಡಲು ಬಂದಿಲ್ಲ ಎಂದು ನಟ ದರ್ಶನ್ ತೂಗುದೀಪ ಹೇಳಿದ್ದಾರೆ.

ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಾಕ್​ಡೌನ್​ನಿಂದ ಒಂದು ವರ್ಷದಿಂದ ನನಗೂ ಕೆಲಸ‌ ಇಲ್ಲ. ಕುರಿ, ಕೋಳಿ ಸಾಕಾಣಿಕೆ ಮಾಡ್ತಿದ್ದೇನೆ. ಕುದುರೆ ಇದೆ ಎಂದ್ರು ಬಂದಿದ್ದೇನೆ. ನಿಮ್ಮ‌ ಮನೆಯಲ್ಲಿ ಕುದುರೆ ಇದ್ದರೆ ಹೇಳಿ ಅಲ್ಲಿಗೂ ಬರುತ್ತೇನೆ ಎಂದು ತಿಳಿಸಿದರು.

ಲಾಕ್​ಡೌನ್​ನಲ್ಲಿ ಪ್ರಾಣಿ ಸಾಕಣಿಕೆ ಮಾಡುತ್ತಿರುವ ದರ್ಶನ್

ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಹಾಗೇನೂ ಇಲ್ಲ. ಬಿಜೆಪಿಯಲ್ಲೂ ನಮಗೆ ಒಳ್ಳೆಯ ಸ್ನೇಹಿತರಿದ್ದಾರೆ ಎಂದು ಹೇಳಿದರು.

ABOUT THE AUTHOR

...view details