ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಬರ್ಟ್' ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಸದ್ಯಕ್ಕೆ ಅವರು ರಾಯಚೂರಿನ ಮಂತ್ರಾಲಯದಲ್ಲಿದ್ದಾರೆ. ರಾಯರ 400ನೇ ಪಟ್ಟಾಭಿಷೇಕ ನಿಮಿತ್ತ ನಡೆಯುತ್ತಿರುವ ಗುರು ವೈಭವ ಉತ್ಸವದಲ್ಲಿ ಭಾಗವಹಿಸಿರುವ ದರ್ಶನ್, ಪೀಠಾಧಿಪತಿ ಸುಬುದೇಂಧ್ರ ತೀರ್ಥ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಮಂತ್ರಾಲಯದ ಗೋಶಾಲೆಯಲ್ಲಿ ಗೋವುಗಳನ್ನು ಕಂಡು ಪುಳಕಿತರಾದ ದರ್ಶನ್ - Darshan in Mantralaya
ರಾಯಚೂರಿನ ಮಂತ್ರಾಲಯದಲ್ಲಿರುವ ದರ್ಶನ್ ಇಂದು ಗೋಶಾಲೆಗೆ ಭೇಟಿ ನೀಡಿದ್ದಾರೆ. ಗೋಶಾಲೆಯಲ್ಲಿರುವ ವಿವಿಧ ರೀತಿಯ ತಳಿಗಳನ್ನು ನೋಡಿ ದರ್ಶನ್ ಸಂತೋಷ ವ್ಯಕ್ತಪಡಿಸಿದ್ದಾರೆ.
![ಮಂತ್ರಾಲಯದ ಗೋಶಾಲೆಯಲ್ಲಿ ಗೋವುಗಳನ್ನು ಕಂಡು ಪುಳಕಿತರಾದ ದರ್ಶನ್ Darshan](https://etvbharatimages.akamaized.net/etvbharat/prod-images/768-512-11055060-thumbnail-3x2-darshan1.jpg)
ಇದನ್ನೂ ಓದಿ:ರಾಬರ್ಟ್ ಯಶಸ್ಸು: ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ದರ್ಶನ್
ಮಠದ ವತಿಯಿಂದ ದರ್ಶನ್ ಅವರಿಗೆ ನಿನ್ನೆ ಸನ್ಮಾನ ಕೂಡಾ ಮಾಡಲಾಯ್ತು. ಇಂದು ಮಂತ್ರಾಲಯದಲ್ಲಿರುವ ಗೋ ಶಾಲೆಗೆ ದರ್ಶನ್ ಭೇಟಿ ನೀಡಿದ್ದಾರೆ. ಮಂತ್ರಾಲಯದಲ್ಲಿ ಗೋ ಶಾಲೆಯಲ್ಲಿರುವ ಹಲವು ತಳಿಯ ಹಸುಗಳನ್ನು ನೋಡಿ ಸ್ವತಃ ದರ್ಶನ್ ಪುಳಕಿತಗೊಂಡಿದ್ದಾರೆ. ತಮ್ಮ ಮೈಸೂರಿನ ಫಾರಂ ಹೌಸ್ನಲ್ಲಿ ಹಲವಾರು ಬಗೆಯ ಪ್ರಾಣಿ ಪಕ್ಷಿಗಳನ್ನು ಸಾಕುತ್ತಿರುವ ದರ್ಶನ್ ಮಂತ್ರಾಲಯದ ಗೋ ಶಾಲೆಯ ಹಸುಗಳ ತಳಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದರ್ಶನ್ಈ ತಳಿಯ ಹಸುಗಳನ್ನು ಕೊಳ್ಳುವ ಯೋಚನೆಯಲ್ಲಿದ್ದರು ಎಂದು ದರ್ಶ್ನ್ ಆಪ್ತರು ಹೇಳಿದ್ದಾರೆ. ಸದ್ಯ 'ರಾಬರ್ಟ್' ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಮುಂದಿನ ಸಿನಿಮಾ ಯಾವುದು ಎಂಬುದು ಶೀಘ್ರದಲ್ಲೇ ತಿಳಿಯಲಿದೆ.