ದಿವಂಗತ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಪ್ರಥಮ ಸಿನಿಮಾ ‘ಅಮರ್’ನಲ್ಲಿ 'ನಾನು ಒಂದು ಪಾತ್ರ ನಿಭಾಯಿಸಬೇಕು' ಎಂದು ಡಿ ಬಾಸ್ ಅವರೇ ಆಸೆ ಪಟ್ಟಿದ್ದರು. ಅದರಂತೆ ಈ ಚಿತ್ರದಲ್ಲಿ ಡಿಬಾಸ್ ಕರೋಡ್ಪತಿಯಾಗಿ ಅಭಿನಯಿಸಿದ್ದಾರೆ. ಅವರು ಒಂದು ಕೊಡವ ಹಾಡಿನಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
ದಚ್ಚು ಎದುರು ನಟಿಸಲು ಅಭಿ ನರ್ವಸ್... ತಮ್ಮನಿಗೆ ಅಭಿನಯದ ಪಟ್ಟು ಹೇಳಿಕೊಟ್ಟ ಚಕ್ರವರ್ತಿ - undefined
ಚಾಲೆಂಜಿಂಗ್ ಸ್ಟಾರ್ ದಚ್ಚು ಕ್ಯಾಮರಾ ಮುಂದೆ ಬರುವಾಗ ಅಭಿಷೇಕ್ ಫುಲ್ ನರ್ವಸ್ ಆಗುತ್ತಿದ್ದರಂತೆ. ಹೇಗಪ್ಪಾ ಇವರ ಎದುರು ಅಭಿನಯಿಸೋದು ಎಂದು ಅಭಿ ಎದೆಯಲ್ಲಿ ಕೊರೆಯಲು ಶುರು ಆಯಿತಂತೆ. ತಮ್ಮ ಈ ಮನದಾಳದ ಅಳಕನ್ನು ಸಾರಥಿ ಎದುರು ಬಿಚ್ಚಿಟ್ಟ ಅಭಿ, 'ಅಣ್ಣ ನೀವು ನಮ್ಮಪ್ಪಾಜಿ ಜೊತೆ ಅಭಿನಯಿಸೋವಾಗ ಹೇಗಿತ್ತು ಎಂದು ಕೇಳಿದರಂತೆ.
ಅದೆಲ್ಲ ಸರಿ; ಚಾಲೆಂಜಿಂಗ್ ಸ್ಟಾರ್ ದಚ್ಚು ಕ್ಯಾಮರಾ ಮುಂದೆ ಬರುವಾಗ ಅಭಿಷೇಕ್ ಫುಲ್ ನರ್ವಸ್ ಆಗುತ್ತಿದ್ದರಂತೆ. ಹೇಗಪ್ಪಾ ಇವರ ಎದುರು ಅಭಿನಯಿಸೋದು ಎಂದು ಅಭಿ ಎದೆಯಲ್ಲಿ ಕೊರೆಯಲು ಶುರು ಆಯಿತಂತೆ. ತಮ್ಮ ಈ ಮನದಾಳ ಅಳಕನ್ನು ಸಾರಥಿ ಎದುರು ಬಿಚ್ಚಿಟ್ಟ ಅಭಿ, 'ಅಣ್ಣ ನೀವು ನಮ್ಮಪ್ಪಾಜಿ ಜೊತೆ ಅಭಿನಯಿಸೋವಾಗ ಹೇಗಿತ್ತು ಎಂದು ಕೇಳಿದರಂತೆ. ತಕ್ಷಣ ದರ್ಶನ್ ಅವರ ನೆನಪು 2003ರಲ್ಲಿ ತೆರೆ ಕಂಡ ‘ಅಣ್ಣಾವ್ರು’ ಸಿನಿಮಾ ದಿವಸಗಳಿಗೆ ತೆರಲಿದೆ. ಅಂದು ದಚ್ಚು ಕೆಲವು ಸನ್ನಿವೇಶಗಳನ್ನು ಅಂಬರೀಶ್ ಅವರ ಜೊತೆ ಅಭಿನಯಿಸಬೇಕಿತ್ತು.
ಮೇಕಪ್ ಹಾಕಿದ ನಂತರ ದರ್ಶನ್ ಅಭಿನಯ ಅಂಬರೀಶ್ ಮುಂದೆ ಸರಾಗವಾಗಿ ಸಾಗಿತ್ತು. ಏನಪ್ಪಾ ಇಷ್ಟು ಈಸಿಯಾಗಿ ಮಾಡಿ ಮುಗಿಸಿದೆ ಎಂದು ಅಂಬರೀಶ್ ಹೇಳಿದ್ದರಂತೆ. ಆಗ ಅಂಬರೀಶ್ ಹೇಳಿಕೊಟ್ಟ ವಿಚಾರ ಮೇಕಪ್ ಹಾಕಿದ ಮೇಲೆ ಕೇವಲ ಕಲಾವಿದ. ಯಾರ ಮುಂದೆ ನಿಂತರು ಸರಿಯೇ ಎಂದು ಹೇಳಿ, ಅಂಬರೀಶ್ ಅವರ ಮೆಚ್ಚುಗೆ ಗಳಿಸಿದ್ದರಂತೆ. ಈ ಸನ್ನಿವೇಶ ಕೇಳಿದ ತಕ್ಷಣ ಅಭಿಷೇಕ್ ಅವರ ಮನಸಿನಲ್ಲಿ ಧೈರ್ಯ ಬಂದಿದೆ. ಆಮೇಲೆ ಸನ್ನಿವೇಶಗಳು ಸರಾಗವಾಗಿ ಆಗುತ್ತಾ ಹೋಯಿತಂತೆ.