ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 50 ದಿನಗಳು ಕಳೆದು ಹೋಯಿತು. ಚಿತ್ರ ಮಂದಿರಗಳಲ್ಲಿ ಸುಯೋಧನನ ಅಟ್ಟಹಾಸ ಮುಗಿಲು ಮುಟ್ಟಿತ್ತು. ಸಿನಿಮಾದಲ್ಲಿ ನಟರ ಅಭಿನಯ ಕಂಡ ಕನ್ನಡಿಗರು ನಟರಿಗೆಲ್ಲ ಬಹುಪರಾಕ್ ಎಂದಿದ್ದಾರೆ.
'ಕುರುಕ್ಷೇತ್ರ' ಯಶಸ್ವಿ ಅರ್ಧ ಶತಕ.. ಅಭಿಮಾನಿಗಳಿಗೆ 'ಸುಯೋಧನ'ನ ವಂದನೆ - ಯಶಸ್ವಿ 50 ದಿನ ಪ್ರದರ್ಶನ ಕಂಡ 'ಕುರುಕ್ಷೇತ್ರ
ಕುರುಕ್ಷೇತ್ರ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನಟ ದರ್ಶನ್ ವಂದನೆ ತಿಳಿಸಿದ್ದಾರೆ. ಚಿತ್ರಕ್ಕೆ 50 ದಿನಗಳ ಸಂಭ್ರಮ. ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡಬೇಕೆಂದು ಪಣ ತೊಟ್ಟ ನಿರ್ಮಾಪಕರಿಗೆ ಅವರ ಆಸೆಗೆ ಬೆನ್ನೆಲುಬಾಗಿ ನಿಂತ ಇಡೀ ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಹೃದಯಪೂರ್ವಕ ವಂದನೆಗಳು ನಿಮ್ಮ ದಾಸ ದರ್ಶನ್ ಎಂದಿದ್ದಾರೆ.
ಇದೀಗ ತಮ್ಮ ಅಭಿಮಾನಿ ದೇವರುಗಳಿಗೆ ಧನ್ಯವಾದ ತಿಳಿಸಿರುವ ನಟ ದರ್ಶನ್, ಚಿತ್ರಕ್ಕೆ 50 ದಿನಗಳ ಸಂಭ್ರಮ. ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡಬೇಕೆಂದು ಪಣ ತೊಟ್ಟ ನಿರ್ಮಾಪಕರಿಗೆ ಅವರ ಆಸೆಗೆ ಬೆನ್ನೆಲುಬಾಗಿ ನಿಂತ ಇಡೀ ಚಿತ್ರತಂಡಕ್ಕೆ ಕೊನೆಯದಾಗಿ ಪ್ರೀತಿಯಿಂದ ಚಿತ್ರಮಂದಿರಗಳತ್ತ ಧಾವಿಸಿ ಆಶೀರ್ವದಿಸಿದ ಅಭಿಮಾನಿಗಳು ಕರ್ನಾಟಕ ಜನತೆಗೆ ನನ್ನ ಹೃದಯಪೂರ್ವಕ ವಂದನೆಗಳು ನಿಮ್ಮ ದಾಸ ದರ್ಶನ್ ಎಂದಿದ್ದಾರೆ.
ಕುರುಕ್ಷೇತ್ರ ಸಿನಿಮಾವನ್ನು ಶಾಸಕ ಮುನಿರತ್ನ ನಿರ್ಮಾಣ ಮಾಡಿದ್ದು, ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಭಾರತದ ಹಲವು ಭಾಷೆಗಳಲ್ಲಿ ತೆರೆಕಂಡಿದ್ದು, ಸಿನಿಮಾದಲ್ಲಿ ದರ್ಶನ್, ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ಅರ್ಜುನ್ ಸರ್ಜಾ ಸೇರಿದಂತೆ ಬಹು ತರಾಗಣವೇ ಇದೆ.