ಕರ್ನಾಟಕ

karnataka

ETV Bharat / sitara

ಕುಶಾಲನಗರದಿಂದ ಮಡಿಕೇರಿಯತ್ತ ಪ್ರಯಾಣ ಬೆಳೆಸಿದ ದರ್ಶನ್ ಹಾಗೂ ಟೀಂ - Darshan Trip with Friends

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ನೇಹಿತರು ಬೆಂಗಳೂರಿನಿಂದ ಹೊರಟು ಕುಶಾಲನಗರ ತಲುಪಿ ಅಲ್ಲಿನ ಸುಂದರ ಕ್ಷಣಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಕುಶಾಲನಗರದ ರೆಸಾರ್ಟ್​ವೊಂದರಲ್ಲಿ ತಂಗಿದ್ದ ರೈಡರ್​​ಗಳು ಅಲ್ಲಿಂದ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

Darshan Trip with Friends
ಸ್ನೇಹಿತರೊಂದಿಗೆ ದರ್ಶನ್ ಟ್ರಿಪ್

By

Published : Nov 18, 2020, 1:37 PM IST

ಕೊಡಗು: ನಿನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸ್ನೇಹಿತರೊಂದಿಗೆ ಬೆಂಗಳೂರು ರಾಜರಾಜೇಶ್ವರಿ ನಗರದ ತಮ್ಮ ಮನೆಯಿಂದ ಬೈಕ್​​ನಲ್ಲಿ ರೈಡ್ ಆರಂಭಿಸಿದರು. ಇದೀಗ ದರ್ಶನ್ ಹಾಗೂ ಸ್ನೇಹಿತರ ತಂಡ ಕುಶಾಲನಗರ ತಲುಪಿ ಅಲ್ಲಿನ ಸುಂದರ ಸ್ಥಳಗಳನ್ನು ನೋಡಿಕೊಂಡು ಅಲ್ಲಿನ ರೆಸಾರ್ಟ್​ವೊಂದರಲ್ಲಿ ತಂಗಿ ಮಡಿಕೇರಿ ಕಡೆಗೆ ಹೊರಟಿದ್ದಾರೆ.

ಸ್ನೇಹಿತರೊಂದಿಗೆ ದರ್ಶನ್ ಟ್ರಿಪ್

ಕೊಡಗು ಜಿಲ್ಲೆಯಾದ್ಯಂತ ಜಾಲಿ ಬೈಕ್ ರೈಡ್ ಮಾಡಲಿರುವ ದರ್ಶನ್, ಅಲ್ಲಿನ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲಿದ್ದಾರೆ. ಮೊದಲಿನಿಂದಲೂ ಬೈಕ್ ಕ್ರೇಜ್ ಇರುವ ದರ್ಶನ್​​, ತಮ್ಮ ಬಾಲ್ಯದ ಸ್ನೇಹಿತರಾದ ಹಾಸ್ಯನಟ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ, ಧರ್ಮ ಕೀರ್ತಿ ರಾಜ್​​​​​​​​​​​​​​​​ ಸೇರಿದಂತೆ 15 ಕ್ಕೂ ಹೆಚ್ಚು ಮಂದಿಯೊಂದಿಗೆ ಕೊಡಗು ಹಾಗೂ ಸುತ್ತಮುತ್ತ ಸವಾರಿ ಮಾಡಲಿದ್ದಾರೆ.

ಸ್ನೇಹಿತರೊಂದಿಗೆ ದರ್ಶನ್

ABOUT THE AUTHOR

...view details