ಇಂದು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಯವರ ಎರಡನೇ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಕ್ತಾದಿಗಳು ಸ್ವಾಮೀಜಿಯವರನ್ನು ಸ್ಮರಿಸುತ್ತಿದ್ದಾರೆ.
ಡಾ. ಶಿವಕುಮಾರ ಸ್ವಾಮೀಜಿಯವರನ್ನು ಸ್ಮರಿಸಿದ ದರ್ಶನ್ - ಶಿವಕುಮಾರಸ್ವಾಮಿಜಿಯ ಪುಣ್ಯಸ್ಮರಣೆ ಮಾಡಿದ ದರ್ಶನ್
ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಯವರ ಎರಡನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ದರ್ಶನ್ ಸ್ವಾಮೀಜಿಯನ್ನು ನೆನೆದು ಗೌರವ ಸಲ್ಲಿಸಿದ್ದಾರೆ.
ಶಿವಕುಮಾರಸ್ವಾಮಿಜಿಯ ಪುಣ್ಯಸ್ಮರಣೆ ಮಾಡಿದ ದರ್ಶನ್ಶಿವಕುಮಾರಸ್ವಾಮಿಜಿಯ ಪುಣ್ಯಸ್ಮರಣೆ ಮಾಡಿದ ದರ್ಶನ್
ನಟ ದರ್ಶನ್ ಕೂಡ ಶಿವಕುಮಾಸ್ವಾಮೀಜಿಯನ್ನು ಸ್ಮರಿಸಿದ್ದು, ''ಲಕ್ಷಾಂತರ ಮಕ್ಕಳಿಗೆ ದಾರಿದೀಪ ಆಗಿದ್ದರು. ಅವರ ಕೆಲಸದಿಂದ ಸದಾ ಜೀವಂತ'' ಎಂದು ನೆನಪಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದರ್ಶನ್, ''ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ವಿಶ್ವಖ್ಯಾತಿ ಗಳಿಸಿದ್ದ ನಮ್ಮೆಲ್ಲರ ಪ್ರೀತಿಯ ಶ್ರೀ ಶಿವಕುಮಾರ ಸ್ವಾಮೀಜಿ ರವರ 2ನೇ ಪುಣ್ಯಸ್ಮರಣೆ ಇಂದು. ಅವರ ಸಾಮಾಜಿಕ ಕಳಕಳಿಯ ಕಾರ್ಯಗಳು ಎಷ್ಟೋ ಜನರಿಗೆ ಸ್ಪೂರ್ತಿಯಾಗಿವೆ. ಲಕ್ಷಾಂತರ ಮಕ್ಕಳಿಗೆ ದಾರಿದೀಪ ಆಗಿದ್ದರು. ಅವರ ಕೆಲಸದಿಂದ ಸದಾ ಜೀವಂತ'' ಎಂದು ಬರೆದಿದ್ದಾರೆ.