ಕರ್ನಾಟಕ

karnataka

ETV Bharat / sitara

ವಿಶೇಷ ಚೇತನ ಮಕ್ಕಳ ಮುಂದೆ ಬೊಂಬಾಟ್ ಡೈಲಾಗ್ ಹೊಡೆದ 'ರಾಬರ್ಟ್'...! - Mysore JSS college

'ರಾಬರ್ಟ್' ಸಿನಿಮಾ ಪ್ರಮೋಷನ್​​​ನಲ್ಲಿರುವ ನಟ ದರ್ಶನ್ ಇಂದು ಮೈಸೂರಿನ ಜೆಎಸ್​​ಎಸ್​ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

Roberrt Dialogue
'ರಾಬರ್ಟ್'

By

Published : Mar 4, 2021, 7:22 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಬಿಡುಗಡೆಗೆ ಇನ್ನೂ 7 ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು ಮಾರ್ಚ್​​ 11ರಂದು 'ರಾಬರ್ಟ್' ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

ಜೆಎಸ್​​ಎಸ್​ ಕಾಲೇಜು ಕಾರ್ಯಕ್ರಮದಲ್ಲಿ ದರ್ಶನ್

ಇದನ್ನೂ ಓದಿ:ಸೆನ್ಸಾರ್​​​​​ನಲ್ಲಿ ಪಾಸಾದ ದರ್ಶನ್ ಅಭಿನಯದ 'ರಾಬರ್ಟ್'

ಸದ್ಯಕ್ಕೆ ದರ್ಶನ್ ಸೇರಿದಂತೆ 'ರಾಬರ್ಟ್' ಚಿತ್ರತಂಡ ಪ್ರಮೋಷನ್​​​ನಲ್ಲಿ ಬ್ಯುಸಿ ಇದೆ. ಮೈಸೂರಿನ ಜೆಎಸ್​​ಎಸ್​​ ಕಾಲೇಜಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಭಾಗವಹಿಸಿದ್ದರು. ಇದು ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮವಾಗಿದ್ದು ದರ್ಶನ್ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರು. ಅಲ್ಲದೆ ಮಕ್ಕಳಿಗಾಗಿ ಡೈಲಾಗ್ ಹೇಳಿ ಅವರನ್ನು ರಂಜಿಸಿದರು. ಕಾಲೇಜು ಸಮಾರಂಭಕ್ಕೆ ದರ್ಶನ್ ಬರುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡ ದರ್ಶನ್, ಎಲ್ಲರೂ 'ರಾಬರ್ಟ್' ಸಿನಿಮಾ ನೋಡಿ ನನ್ನನ್ನು ಆಶೀರ್ವದಿಸಿ ಎಂದು ಕೇಳಿಕೊಂಡರು. ದರ್ಶನ್ ಜೊತೆ ನಟ ಯಶಸ್ ಸೂರ್ಯ ಹಾಗೂ ಇನ್ನಿತರರು ಈ ಸಮಾರಂಭದಲ್ಲಿ ಹಾಜರಿದ್ದರು.

ಮಕ್ಕಳೊಂದಿಗೆ ಮಕ್ಕಳಾಗಿ ಬೆರೆದ ದರ್ಶನ್

ABOUT THE AUTHOR

...view details