ರಾಬರ್ಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಾಕ್ಸ್ ಆಫೀಸ್ ಹಿಟ್ ಸಿನಿಮಾ. ಸದ್ಯ ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನ ಪೂರೈಯಿಸಿರುವ ರಾಬರ್ಟ್ ಸಿನಿಮಾವನ್ನ, ಇದೇ ಏಪ್ರಿಲ್ನಿಂದ ಮನೆಯಲ್ಲೇ, ಫ್ಯಾಮಿಲಿ ಸಮೇತ ನೋಡಬಹುದಾಗಿದೆ.
ಈ ತಿಂಗಳ ಅಂತ್ಯದಲ್ಲಿ ಅಮೇಜಾನ್ನಲ್ಲಿ ಅಬ್ಬರಿಸಲು ರೆಡಿಯಾದ "ರಾಬರ್ಟ್ " - ಚಾಲೆಂಜಿಂಗ್ ಸ್ಟಾರ್ ದರ್ಶನ್
ರಾಬರ್ಟ್ ಸಿನಿಮಾ ಸದ್ಯದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಬಾಚಿಕೊಂಡಿರುವ ರಾಬರ್ಟ್ ಚಿತ್ರ, ಏಪ್ರಿಲ್ 25 ರಂದು ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಲಿದೆ.
ಈ ತಿಂಗಳ ಅಂತ್ಯದಲ್ಲಿ ಅಮೆಜಾನ್ನಲ್ಲಿ ಅಬ್ಬರಿಸೊಕೆ ರೆಡಿಯಾದ "ರಾಬರ್ಟ್ "
ಹೌದು, ರಾಬರ್ಟ್ ಸಿನಿಮಾ ಸದ್ಯದಲ್ಲೇ ಒಟಿಟಿ ಫ್ಲಾಟ್ ಫಾರಂನಲ್ಲಿ ರಿಲೀಸ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಬಾಚಿಕೊಂಡಿರುವ ರಾಬರ್ಟ್ ಚಿತ್ರ, ಏಪ್ರಿಲ್ 25 ರಂದು ಚಿತ್ರ ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿದೆ. ಇನ್ನು ಮೂಲಗಳ ಪ್ರಕಾರ 20 ಕೋಟಿ ಮೊತ್ತಕ್ಕೆ ರಾಬರ್ಟ್ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ಮಾರಾಟವಾಗಿದೆ ಎನ್ನಲಾಗಿದೆ.
ಓದಿ : ವರುಣ್ ಧವನ್ಗೆ ಮಿಸ್ ಯು ಅಂದ ಕೃತಿ ಸನೋನ್.. 'ಬಹುತ್ ಮಜಾ ಆಯಾ ಆಪ್ಕಾ ಸಾಥ್'
Last Updated : Apr 20, 2021, 2:28 PM IST