ಹುಬ್ಬಳ್ಳಿ : ನಟ ದರ್ಶನ್ ಬಹುನಿರೀಕ್ಷಿತ 'ರಾಬರ್ಟ್' ಚಿತ್ರ ತೆರೆಗೆ ಬರಲು ಕೆಲ ದಿನಗಳಷ್ಟೇ ಬಾಕಿ ಇವೆ. ಹೈದರಾಬಾದ್ನಲ್ಲಿ ಈಗಾಗಲೇ ಸಿನಿಮಾ ಪ್ರೊಮೋಷನ್ ಜೋರಾಗಿ ಮಾಡಿರುವ ಚಿತ್ರತಂಡ ಆಡಿಯೋ ಲಾಂಚ್ನ್ನು ಗಂಡು ಮೆಟ್ಟಿದ ನಾಡಿನಲ್ಲಿ ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆಸಿದೆ. ಇದೇ ಭಾನುವಾರ ನಡೆಯಲಿರುವ ಆಡಿಯೋ ಲಾಂಚ್ ಪ್ರಿ-ಇವೆಂಟ್ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಗಂಡುಮೆಟ್ಟಿದ ನೆಲದಲ್ಲಿ 'ರಾಬರ್ಟ್' ಪ್ರಿ-ರಿಲೀಸ್ ಈವೆಂಟ್...'ಡಿ ಬಾಸ್' ಆಗಮನಕ್ಕೆ ಹುಬ್ಬಳ್ಳಿಯಲ್ಲಿ ಭರದ ಸಿದ್ಧತೆ - ರಾಬರ್ಟ್ ಆಡಿಯೋ ಲಾಂಚ್
ರಾಬರ್ಟ್ ಚಿತ್ರತಂಡ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿದೆ. ಬರುವ ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಡಿ ಬಾಸ್ಗಾಗಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ.
ರಾಬರ್ಟ್
ಕಳೆದ ಒಂದು ವರ್ಷದಿಂದ ಕಾಯುತ್ತಿದ್ದ ಆ ಸಮಯಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಚಾಲೆಂಜಿಂಗ್ ಸ್ಟಾರ್ರನ್ನು ಬಿಗ್ ಸ್ಕ್ರೀನ್ನಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ನಿರೀಕ್ಷೆಯಂತೆ ಮಾರ್ಚ್ 11ಕ್ಕೆ 'ರಾಬರ್ಟ್' ತೆರೆಕಾಣಲಿದೆ.
ಸದ್ಯ ಚಿತ್ರತಂಡ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಕೇಶ್ವಾಪುರ ರೈಲ್ವೇ ಮೈದಾನದಲ್ಲಿ ಆಯೋಜನೆ ಮಾಡಿದ್ದು, ದರ್ಶನ್ ಸೇರಿದಂತೆ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ತೆಲುಗು ಸ್ಟಾರ್ ಜಗಪತಿ ಬಾಬು ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.