ಹೈದರಾಬಾದ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಲನಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರೆಸಿದೆ. ಕೊರೊನಾದಿಂದ ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳ ಕಲೆಕ್ಷನ್ ಹೇಗೆ ಆಗುತ್ತೆ ಅಂತಾ ಸಿನಿಮಾ ನಿರ್ಮಾಪಕರ ಲೆಕ್ಕಾಚಾರ ಶುರುವಾಗಿತ್ತು. ಆದರೆ ದರ್ಶನ್ ಅವರ ರಾಬರ್ಟ್ ಸಿನಿಮಾ ಎರಡು ದಿನದಲ್ಲಿ 30 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಎರಡನೇ ದಿನಕ್ಕೆ 30 ಕೋಟಿ ಕ್ಲಬ್ ಸೇರಿದ ದರ್ಶನ್ ಅಭಿನಯದ ರಾಬರ್ಟ್! - ರಾಬರ್ಟ್ ಸಿನಿಮಾದ ಒಟ್ಟು ಕಲೆಕ್ಷನ್
ಬಿಡುಗಡೆಯಾದ ಮೊದಲ ದಿನವೇ ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡ ರಾಬರ್ಟ್ ಚಿತ್ರ ಸ್ಯಾಂಡಲ್ವುಡ್ ನಲ್ಲಿ 17.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನೂ ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ರಾಬರ್ಟ್ ಸಿನಿಮಾ 12.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಾಬರ್ಟ್ ಸಿನಿಮಾ 30 ಕೋಟಿ ಕ್ಲಬ್ ಸೇರಿದೆ.
ರಾಬರ್ಟ್ ಕಲೆಕ್ಷನ್
ಬಿಡುಗಡೆಯಾದ ಮೊದಲ ದಿನವೇ ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡ ರಾಬರ್ಟ್ ಚಿತ್ರ ಸ್ಯಾಂಡಲ್ವುಡ್ನಲ್ಲಿ 17.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ರಾಬರ್ಟ್ ಸಿನಿಮಾ 12.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಾಬರ್ಟ್ ಸಿನಿಮಾ 30 ಕೋಟಿ ಕ್ಲಬ್ ಸೇರಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಾಬರ್ಟ್ ಮೊದಲ ದಿನ 3.12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ತೆಲುಗಿನ ರಾಬರ್ಟ್ ಗಳಿಸಿದ್ದು ಎಷ್ಟು ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಬಿಕೆಟಿ ಮತ್ತು ಸೌತ್ ಕೆನರಾ =5 ಕೋಟಿ (Including multiplex )
ಎಂಎಂಸಿಎಚ್ =2 ಕೋಟಿ
ದುರ್ಗ ಮತ್ತು ದಾವಣಗೆರೆ =1.5 ಕೋಟಿ
ಶಿವಮೊಗ್ಗ =78 ಲಕ್ಷ
ಹೈದರಾಬಾದ್ ಕರ್ನಾಟಕ =2 ಕೋಟಿ
ಬಾಂಬೆ ಕರ್ನಾಟಕ =1.5 ಕೋಟಿ
ಒಟ್ಟು: 12.78 ಕೋಟಿ ರೂಪಾಯಿ