ಬೆಂಗಳೂರು:ರಾಬರ್ಟ್..ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹುನಿರೀಕ್ಷೆಯ ಚಿತ್ರ...ಈ ಸಿನಿಮಾ ಸ್ಟಾರ್ಟ್ ಆದಗಿಂದಲೂ ದಚ್ಚು ಅಭಿನಯದ ರಾಬರ್ಟ್ ಸಿನಿಮಾ ಒಂದಲ್ಲ ಒಂದು ಹೈಲೆಟ್ಸ್ ಟಾಕ್ ನಲ್ಲಿದೆ.
ಈ ಮೊದಲು ಗ್ಯಾಂಗ್ ಸ್ಟಾರ್ ಪೋಸ್ಟರ್ ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು, ಈಗ ರಾಬರ್ಟ್ ಚಿತ್ರತಂಡ ಜಬರ್ದಸ್ತ್ ಹಾಡೊಂದನ್ನ ರಿಲೀಸ್ ಮಾಡಿದೆ..ಶ್ರೀರಾಮನವಮಿ ಹಬ್ಬದ ನಿಮಿತ್ತ, ರಾಮನಾಮ ಹಾಡಿರೋ ರಾಮ ಬರುವನು ಎಂಬ ಪವರ್ಫುಲ್ ಹಾಡು ಅನಾವರಣಗೊಂಡಿದೆ.
ದರ್ಶನ್ ಸಿನಿಮಾ ಕೆರಿಯರ್ ನಲ್ಲಿ ಫಸ್ಟ್ ಟೈಮ್ ಹನುಮಂತನ ಅವತಾರದಲ್ಲಿ ರಾಬರ್ಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಹಾಡಿನ ಲಿರಿಕಲ್ ಹಾಡಿನೊಂದಿಗೆ ರಾಮನ ಜಪ ಮಾಡುತ್ತಾರೆ ದಚ್ಚು .ಒಂದು ಅಚ್ಚರಿ ವಿಷ್ಯ ಅಂದ್ರೆ, ವರ್ಷ ಪೂರ್ತಿ ನಾನ್ ವೆಜ್ ತಿನ್ನುವ ದರ್ಶನ್, ಈ ಹನುಮಂತನ ಪಾತ್ರಕ್ಕಾಗಿ ಮಾಂಸಾಹಾರವನ್ನ ತ್ಯಜಿಸಿ ಅಭಿನಯಿಸಿದ್ದಾರಂತೆ.. ಇದರ ಜೊತೆಗೆ 15 ದಿನಗಳ ಕಾಲ ಹನುಮಂತನ ಸಿಕ್ವೆನ್ಸ್ ಚಿತ್ರೀಕರಣ ಮಾಡಬೇಕಾದ ಇಡೀ ಚಿತ್ರತಂಡ ನಾನ್ ವೇಜ್ ತ್ಯಜಿಸಿದೆ ಎನ್ನುತ್ತಾರೆ ನಿರ್ದೇಶಕ ತರುಣ್ ಸುಧೀರ್.
ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಕ್ಯಾಚೀ ಟ್ಯೂನ್ಗೆ ಅಷ್ಟೇ ಜೋಶ್ ಆಗಿ ಬಹುಭಾಷಾ ಗಾಯಕ ಶಂಕರ್ ಮಹದೇವನ್ ಹಾಡಿದ್ದಾರೆ.. ಕ್ಯಾಮರಾಮ್ಯಾನ್ ಸುಧಾಕರ್ ಈ ಹಾಡನ್ನ ಚಿತ್ರೀಕರಿಸಿದ್ದು, ಬಹಳ ಅದ್ಧೂರಿಯಾಗಿ ಉಮಾಪತಿ ನಿರ್ಮಾಣ ಮಾಡಿದ್ದಾರೆ..ನಿರ್ದೇಶಕ ತರುಣ್ ಸುಧೀರ್ ಹೇಳುವ ಪ್ರಕಾರ ಇದೊಂದು ಮೇಜರ್ ಸಿಕ್ವೇನ್ಸ್, ಈ ಚಿತ್ರದಲ್ಲಿ ದರ್ಶನ್ ಹನುಮಂತನ ಲುಕ್ ನಲ್ಲಿ ಬರ್ತಾರಂತೆ.. ದರ್ಶನ್‌ಗೆ ಆಶಾ ಭಟ್ ನಾಯಕಿ. ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ವಿಲನ್ ಆಗಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸೆನ್ಸಾರ್ ಟೇಬಲ್ ನಲ್ಲಿರೋ ರಾಬರ್ಟ್ ಸಿನಿಮಾ, ಕೊರೊನಾ ಲಾಕ್ಡೌನ್ ಮುಗಿದ ನಂತ್ರ ರಿಲೀಸ್ ಗೆ ರೆಡಿಯಾಗಿದೆ..ಆದರೆ ಡೇಟ್ ಮಾತ್ರ ಫೈನಲ್ ಆಗಿಲ್ಲ.