ಕರ್ನಾಟಕ

karnataka

ETV Bharat / sitara

ಅಂಬರೀಶ್ ಅಗಲಿ ಇಂದಿಗೆ 2 ವರ್ಷಗಳು...ಅಪ್ಪಾಜಿಯನ್ನು ನೆನೆದ ದರ್ಶನ್​​​ - Ambareesh 2nd Year Death Anniversary

ಇಂದು ರೆಬಲ್ ಸ್ಟಾರ್ ಅಂಬರೀಶ್​ ಅವರ 2ನೇ ವರ್ಷದ ಪುಣ್ಯತಿಥಿಯಾಗಿದ್ದು ಅಂಬರೀಶ್ ಜೊತೆಗಿರುವ ಫೋಟೋವೊಂದನ್ನು ನಟ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪ್ರೀತಿಯ ಅಪ್ಪಾಜಿಯನ್ನು ಸ್ಮರಿಸಿದ್ದಾರೆ.

Darshan reminds Ambareesh
ಅಪ್ಪಾಜಿಯನ್ನು ನೆನೆದ ದರ್ಶನ್​​​

By

Published : Nov 24, 2020, 9:47 AM IST

ರೆಬಲ್​ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಇಂದು ಎರಡು ವರ್ಷಗಳು ತುಂಬಿದೆ. ಸುಮಲತಾ, ಅಭಿಷೇಕ್ ಹಾಗೂ ಕುಟುಂಬ ಇಂದು ಅಂಬಿ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಇವರೊಂದಿಗೆ ಅಭಿಮಾನಿಗಳು ಅಂಬಿ ಸಮಾಧಿ ಬಳಿ ತೆರಳಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ತಮ್ಮ ಪ್ರೀತಿಯ ಅಂಬಿ ಅಪ್ಪಾಜಿಯನ್ನು ನೆನೆದಿದ್ದಾರೆ.

ಅಂಬರೀಶ್ ಅವರ ಕೈ ಹಿಡಿದು ಮಾತನಾಡುತ್ತಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ದರ್ಶನ್ "ಅಂಬರೀಶ್ ಅವರನ್ನು ಸ್ಮರಿಸಿದ್ದಾರೆ. ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಅವರು ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ" ಎಂದು ಬರೆದುಕೊಂಡಿದ್ದಾರೆ. 2018 ನವೆಂಬರ್ 24 ರಂದು ಅಂಬರೀಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದ ದರ್ಶನ್ ಶೂಟಿಂಗ್ ಕ್ಯಾನ್ಸಲ್ ಮಾಡಿ ಬೆಂಗಳೂರಿಗೆ ಬಂದು ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details