ಕರ್ನಾಟಕ

karnataka

ETV Bharat / sitara

'ಇಂಡಿಯಾ vs ಇಂಗ್ಲೆಂಡ್' ಟ್ರೇಲರ್ ಬಿಡುಗಡೆ ಮಾಡಿದ ಚಾಲೆಂಜಿಂಗ್ ಸ್ಟಾರ್​​...! - ಇಂಡಿಯಾ ವರ್ಸಸ್ ಇಂಗ್ಲೆಂಡ್ ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಟೈಟಲ್ ವಿಶೇಷತೆಯನ್ನು ವರ್ಣಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಚಿತ್ರದ ಟ್ರೇಲರ್​​​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇಂಡಿಯಾ vs ಇಂಗ್ಲೆಂಡ್ ನಾಗತಿಹಳ್ಳಿ ಚಂದ್ರಶೇಖರ್ ಅವರ 15 ನೇ ಸಿನಿಮಾವಾಗಿದ್ದು ಮೊದಲ ಬಾರಿಗೆ ನಿರ್ದೇಶನದ ಜೊತೆ ಚಿತ್ರದ ವಿತರಣೆ ಕೂಡಾ ಅವರೇ ಮಾಡುತ್ತಿದ್ದಾರೆ.

India vs England
'ಇಂಡಿಯಾ vs ಇಂಗ್ಲೆಂಡ್'

By

Published : Jan 13, 2020, 5:30 PM IST

ಸ್ಯಾಂಡಲ್​​ವುಡ್​​​​​​​​​​​​ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ವಷಿಷ್ಠ ಸಿಂಹ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಟ್ರೇಲರನ್ನು ಚಾಲೆಂಜಿಂಗ್​ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದಾರೆ.

ಜನವರಿ 24 ರಂದು ಬಿಡುಗಡೆಯಾಗುತ್ತಿರುವ 'ಇಂಡಿಯಾ vs ಇಂಗ್ಲೆಂಡ್'

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಟೈಟಲ್ ವಿಶೇಷತೆಯನ್ನು ವರ್ಣಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಚಿತ್ರದ ಟ್ರೇಲರ್​​​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಲ್ಲದೆ ಚಿತ್ರದ ಟ್ರೇಲರನ್ನು ದರ್ಶನ್ ಲಾಂಚ್ ಮಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ನಟಿ ಸುಮಲತಾ ಅಂಬರೀಶ್, ನನ್ನ ಮಗ ದರ್ಶನ್ ಜೊತೆ ಇರುವವರಿಗೂ ನಾನು ಗೆಲ್ತಾನೆ ಇರ್ತೀನಿ', ಅದೇ ರೀತಿ ಈ‌ ಚಿತ್ರ ಕೂಡಾ ಗೆದ್ದೆ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಅಲ್ಲದೆ ಚಿತ್ರದಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರವಾಗಿದ್ದು. ಮೊದಲ ಬಾರಿಗೆ ನಾನು ಪ್ರಕಾಶ್ ಬೆಳವಾಡಿ ಮಾನ್ವಿತಾ ಹರೀಶ್ ಅವರ ಜೊತೆ ಕೆಲಸ ಮಾಡಿರುವುದು ಬಹಳ ಖುಷಿ ಕೊಟ್ಟಿದೆ ಎಂದು ಚಿತ್ರದ ಶೂಟಿಂಗ್ ನೆನಪುಗಳನ್ನು ಸುಮಲತಾ ಮೆಲುಕು ಹಾಕಿದರು.

'ಇಂಡಿಯಾ vs ಇಂಗ್ಲೆಂಡ್' ಟ್ರೇಲರ್ ಬಿಡುಗಡೆ ಸಮಾರಂಭ

ಈ ಚಿತ್ರದಲ್ಲಿ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಹಳ ವಿಶೇಷವಾಗಿದ್ದು ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ. ದರ್ಶನ್ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವುದು ನಮಗೆ ಬಹಳ ಖುಷಿ ನೀಡಿದೆಎಂದು ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ದರ್ಶನ್​​​ಗೆ ಧನ್ಯವಾದ ಅರ್ಪಿಸಿದರು. ಇನ್ನು ಮಾನ್ವಿತಾ ಕಾಮತ್ ಮಾತನಾಡಿ ಯಾವ ಸಿನಿಮಾಗಳನ್ನು ಫ್ಯಾಮಿಲಿ ಸಹಿತ ನೋಡಬೇಕು..ಯಾವ ಸಿನಿಮಾಗಳನ್ನು ಫ್ರೆಂಡ್ಸ್ ಹಾಗೂ ಲವರ್ ಜೊತೆ ನೋಡಬೇಕು ಎಂದು ಬಹಳಷ್ಟು ಬಾರಿ ಕನ್ಫ್ಯೂಸ್​ ಆಗುವುದು ಸಾಮಾನ್ಯ. ಆದರೆ ಈ ಸಿನಿಮಾವನ್ನು ಇಡೀ ಫ್ಯಾಮಿಲಿ ಜೊತೆ ಕುಳಿತು ನೋಡಬಹುದು ಎಂದು ಹೇಳಿದರು.

ಇಂಡಿಯಾ vs ಇಂಗ್ಲೆಂಡ್ ನಾಗತಿಹಳ್ಳಿ ಚಂದ್ರಶೇಖರ್ ಅವರ 15 ನೇ ಸಿನಿಮಾವಾಗಿದ್ದು ಮೊದಲ ಬಾರಿಗೆ ನಿರ್ದೇಶನದ ಜೊತೆ ಚಿತ್ರದ ವಿತರಣೆ ಕೂಡಾ ಅವರೇ ಮಾಡುತ್ತಿದ್ದಾರೆ. ವಿಶ್ವಾದ್ಯಂತ ಎಲ್ಲೆಲ್ಲಿ ಕನ್ನಡಿಗರು ಇದ್ದಾರೆ ಅಲ್ಲೆಲ್ಲಾ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಮೇಷ್ಟ್ರು ಹೇಳಿದ್ದಾರೆ. ನನ್ನ 'ಅಮೆರಿಕ ಅಮೆರಿಕ' ಸಿನಿಮಾ ನಂತರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಇದು. ಜನವರಿ 24 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಎಂದು ಮೇಷ್ಟ್ರು ಮನವಿ ಮಾಡಿದ್ದಾರೆ. ಚಿತ್ರಕ್ಕೆ ಶಂಕರೇಗೌಡ ಬಂಡವಾಳ ಹೂಡಿದ್ದು, ಸುಮಲತಾ ಅಂಬರೀಶ್, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ ಹಾಗೂ ನಿರ್ದೇಶಕ ಶಿವಮಣಿ ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದು 'ಅಮೆರಿಕ ಅಮೆರಿಕ' ಚಿತ್ರದಂತೆ ಈ ಸಿನಿಮಾ ಕೂಡಾ ಕಮಾಲ್ ಮಾಡುತ್ತಾ ಕಾದು ನೋಡಬೇಕು.

For All Latest Updates

TAGGED:

ABOUT THE AUTHOR

...view details