ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ಅಭಿನಯದ ಚೊಚ್ಚಲ ಚಿತ್ರ ‘ಟಕ್ಕರ್‘ ಚಿತ್ರೀಕರಣ ಪೂರ್ಣಗೊಂಡಿದೆ. ಈ ಮೂಲಕ ಸ್ಯಾಂಡಲ್ವುಡ್ಗೆ ಮತ್ತೊಂದು ಆರಡಿ ಕಟೌಟ್ ಆಗಮನವಾಗುತ್ತಿದೆ.
ಶೂಟಿಂಗ್ ಮುಗಿಸಿದ ‘ಟಕ್ಕರ್‘... ತೆರೆ ಮೇಲೆ ಅಬ್ಬರಿಸಲು ದರ್ಶನ್ ಸಂಬಂಧಿ ರೆಡಿ - undefined
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂಬಂಧಿ ಮನೋಜ್ ನಟಿಸಿರುವ ‘ಟಕ್ಕರ್‘ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ.
ಎಸ್ಎಲ್ಎನ್ ಕ್ರಿಯೇಶನ್ ಬ್ಯಾನರ್ ಅಡಿ ಕೆ.ಎನ್. ನಾಗೇಶ್ ಕೋಗಿಲು ನಿರ್ಮಿಸುತ್ತಿರುವ ಈ ಸಿನಿಮಾವನ್ನು ರಘುಶಾಸ್ತ್ರಿ ನಿರ್ದೇಶಿಸಿದ್ದಾರೆ. ಹೊಡೆದಾಟದ ಕೆಲವೊಂದು ದೃಶ್ಯಗಳು ಹಾಗೂ ಹಾಡೊಂದರ ಚಿತ್ರೀಕರಣದ ಮೂಲಕ ಇತ್ತೀಚೆಗೆ ಚಿತ್ರದ ಶೂಟಿಂಗ್ ಮುಗಿದಿದೆ. ಕಿರುತೆರೆಯ ಜನಪ್ರಿಯ ನಟಿ ರಂಜನಿ ರಾಘವನ್, ನಾಯಕ ಮನೋಜ್ ಜೋಡಿಯಾಗಿ ಅಭಿನಯಿಸಿದ್ದಾರೆ. ‘ಟಕ್ಕರ್’ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ.
ಡಿಫರೆಂಟ್ ಡ್ಯಾನಿ ಈ ಚಿತ್ರದ ಸಾಹಸ ಸನ್ನಿವೇಶಗಳಿಗೆ ನಿರ್ದೇಶನ ಮಾಡಿದ್ದಾರೆ. ಇನ್ನು ಬೆಂಗಳೂರಿನ ಹೆಚ್ಎಂಟಿ ಬಡಾವಣೆಯಲ್ಲಿ ಈಶ್ವರಿ ಕುಮಾರ್ ಕಲಾನಿರ್ದೇಶನದಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. ಮಣಿಕಾಂತ್ ಖದ್ರಿ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಡಾ ವಿ. ನಾಗೇಂದ್ರ ಪ್ರಸಾದ್ ರಚನೆಯ ‘ಆನೆ ನಡೆದಿದ್ದೇ ದಾರಿ ಅಲ್ವೇನ್ರಿ.. ಯಾರೂ ಕೊಡಬೇಡಿ ಟಕ್ಕರ್... ಇದು ಮನೋಜ್ ಪರಿಚಯದ ಗೀತೆ. ಭಜರಂಗಿ ಲೋಕಿ , ಸುಮಿತ್ರಮ್ಮ, ಸಾಧು ಕೋಕಿಲ, ಲಕ್ಷ್ಮಣ್ ಶಿವಶಂಕರ್, ಅಶ್ವಿನಿ ಹಾಸನ್, ಶಂಕರ್ ಅಶ್ವಥ್ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರವೇ ತೆರೆಗೆ ಬರಲಿದೆ.