ಕರ್ನಾಟಕ

karnataka

ETV Bharat / sitara

ದರ್ಶನ್​ ಮುಂದಿನ ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರ! - ದರ್ಶನ್​ ಮುಂದಿನ ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ

ಚಾಲೆಂಜಿಂಗ್ ದರ್ಶನ್ ತಮ್ಮ ಮುಂದಿನ ಚಿತ್ರಕ್ಕೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 12 ಕೋಟಿಯಂತೆ. ಇಂತಹದೊಂದು ಬ್ರೇಕಿಂಗ್ ನ್ಯೂಸ್ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

darshan next movie  Remuneration
ದರ್ಶನ್​ ಮುಂದಿನ ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರ!

By

Published : Jan 22, 2020, 11:13 PM IST

ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಅಂತ ಬ್ರಾಂಡ್ ಕ್ರಿಯೇಟ್​​ ಮಾಡಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮ‌ೂಲಕ ಹೊಸ ದಾಖಲೆ ಬರೆದಿದ್ದಾರೆ. ಸದ್ಯ ರಾಬರ್ಟ್ ಸಿನಿಮಾದ ಟಾಕಿ ಪೋಷನ್ ಮುಗಿಸಿರೋ ದಚ್ಚು, ತಮ್ಮ ಮುಂದಿನ ಚಿತ್ರಕ್ಕಾಗಿ ತೆಗೆದುಕೊಳ್ಳುತ್ತಿರುವ ಸಂಭಾವನೆ ಕೇಳಿದ್ರೆ ಇಡೀ ಕನ್ನಡ ಚಿತ್ರರಂಗದ ನಿರ್ಮಾಪಕರು ಶಾಕ್ ಆಗೋದು ಗ್ಯಾರಂಟಿ.

ಯಜಮಾನ ಹಾಗು ಕುರುಕ್ಷೇತ್ರ ಸಿನಿಮಾಕ್ಕೆ 8 ಕೋಟಿ ಸಂಭಾವನೆ ಪಡೆದಿದ್ದ ಸಾರಥಿ, ಮುಂಬೈ ಮೂಲದ ನಿರ್ಮಾಪಕ ಧ್ರುವ್ ದಾಸ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

ಅಷ್ಟಕ್ಕೂ ಚಾಲೆಂಜಿಂಗ್ ದರ್ಶನ್ ಹೆಸರಿಡದ ಚಿತ್ರಕ್ಕೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 12 ಕೋಟಿಯಂತೆ. ಇಂತಹದೊಂದು ಬ್ರೇಕಿಂಗ್ ನ್ಯೂಸ್ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇನ್ನು ಈ ಯಜಮಾನನಿಗೆ 12 ಕೋಟಿ ಸಂಭಾವನೆ ಕೊಡುತ್ತಿರುವ ಆ ಕೋಟಿ ನಿರ್ಮಾಪಕ ಯಾರು ಅಂತೀರಾ?. 2014ರಲ್ಲಿ ಶಿವರಾಜ್ ಕುಮಾರ್ ಹಾಗು ರಮ್ಯಾ ನಟಿಸಿದ್ದ ಚಿತ್ರ ನಿರ್ಮಾಣ ಮಾಡಿದ್ದ ಧ್ರುವ್ ದಾಸ್. ಈಗ ಬಹು ಕೋಟಿ ವೆಚ್ಚದಲ್ಲಿ ದರ್ಶನ್ ಸಿನಿಮಾಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಧ್ರುವ್ ದಾಸ್

ಇನ್ನು, ಈ ಸಿನಿಮಾವನ್ನ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರಂತೆ. ಈ ಸಿನಿಮಾ ನಿರ್ದೇಶನಕ್ಕೆ‌ ತರುಣ್ ಸುಧೀರ್ ಬರೋಬ್ಬರಿ ಎರಡುವರೆ ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಇನ್ನು ರಾಬರ್ಟ್​ ನಂತ್ರ ಸೆಟ್ಟೇರಲಿರುವ ಈ ಸಿನಿಮಾ‌ಕ್ಕೆ ಜೂನ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ ಎನ್ನಲಾಗ್ತಿದೆ.

ABOUT THE AUTHOR

...view details