ಕರ್ನಾಟಕ

karnataka

ETV Bharat / sitara

ಬಾಲ್ಯದಲ್ಲಿ ತನ್ನನ್ನು ಶಾಲೆಗೆ ಕರೆದೊಯ್ಯುತ್ತಿದ್ದ ರಿಯಲ್​ 'ಸಾರಥಿ' ಭೇಟಿ ಮಾಡಿದ ದರ್ಶನ್​ - Darshan meets bus driver

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ದೊಡ್ಡಗುಣ ಮತ್ತೊಮ್ಮೆ ಸಾಬೀತಾಗಿದೆ. ಅಂದು ಬಾಲಕ ದರ್ಶನ್‌ರನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಚಾಲಕನನ್ನು ಭೇಟಿ ಮಾಡಿ, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಸಾರಥಿ.

Darshan meets bus driver who took him to school daily
ಬಾಲ್ಯದ ವಿಶೇಷ ವ್ಯಕ್ತಿಯನ್ನು ಭೇಟಿಯಾದ ‘ಸಾರಥಿ’..

By

Published : Mar 23, 2021, 12:19 PM IST

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಗೆ ಮೈಸೂರಿನ ಜೊತೆ ವಿಶೇಷ ನಂಟು. ತಮ್ಮ ಬಾಲ್ಯವನ್ನು ಎಂದಿಗೂ ಮರೆಯದ ದರ್ಶನ್​, ಅಂದು ತಮ್ಮನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಬಸ್ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ದರ್ಶನ್​ ಶಾಲೆಗೆ ತೆರಳುತ್ತಿದ್ದ ಬಸ್​ನ ಚಾಲಕನ ಮನೆಗೆ ಭೇಟಿ ನೀಡಿ, ಸಮಯ ಕಳೆದು ಬಂದಿದ್ದಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ಚಾಲೆಂಜಿಂಗ್​ ಸ್ಟಾರ್, ನಮ್ಮ ಶಾಲೆಯ ಕೆಎಸ್ಆರ್​ಟಿಸಿ ಬಸ್ ರೂಟ್ ಡ್ರೈವರ್ ಆಗಿದ್ದ ರಿಯಲ್​ ಸಾರಥಿಯನ್ನು ರೀಲ್​ ಸಾರಥಿ ಭೇಟಿ ಮಾಡಿದ್ದು, ಅವರ 80 ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅವರ ಆಶೀರ್ವಾದ ಪಡೆದಿರುವ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಪತ್ನಿ ಯೋಗದಲ್ಲಿ, ಪತಿ ಡ್ಯಾನ್ಸ್​ನಲ್ಲಿ ಬ್ಯುಸಿ: ಶಿಲ್ಪಾ ಶೆಟ್ಟಿ - ರಾಜ್​ ಕುಂದ್ರಾ ಬಿಂದಾಸ್​ ವಿಡಿಯೋ

ಅಂದು ಬಾಲಕ ದರ್ಶನ್‌ರನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಚಾಲಕನನ್ನು ಭೇಟಿ ಮಾಡಿ, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಯಜಮಾನ.

ABOUT THE AUTHOR

...view details